ಬೀದರ್: ಗುತ್ತಿಗೆದಾರ ಸಚ್ಚಿನ್ ಪಾಂಚಾಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸಿಐಡಿ ತನಿಖೆ ಆರಂಭಿಸಿದ್ದು, ಕುಟುಂಬಸ್ಥರ ವಿಚಾರಣೆ ನಡೆಸಿದೆ.
೨ ದಿನದಿಂದ ಬೀದರ್ನಲ್ಲಿ ಬೀಡುಬಿಟ್ಟಿರುವ ಸಿಐಡಿ ತಂಡ, ಸಚ್ಚಿನ್ ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಇಂದು ಕಲುಬುರಗಿಗೆ ಆಗಮಿಸಲಿದ್ದು, ಕೈಗಾರಿಕಾ ಪ್ರದೇಶದಲ್ಲಿರುವ ಸಚ್ಚಿನ್ ಬಾಡಿಗೆ ಮನೆಯ ಬಳಿ ವಿಚಾರಣೆ ನಡೆಸಲಿದ್ದಾರೆ. ಜತೆಗೆ, ಅವರ ಕಚೇರಿಯಲ್ಲಿಯೂ ತನಿಖೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚ್ಚಿನ್ ಆತ್ಮಹತ್ಯೆಗೆ ಪ್ರಿಯಾಂಕ್ ಖರ್ಗೆ ಬೆಂಬಲಿಗರ ಧಮಕಿ ಕಾರಣ ಎಂದು ಬಿಜೆಪಿ ಆರೋಪ ಮಾಡಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ನಾಯಕರ ವಿರುದ್ಧ ಮಾತಿನ ಕಚಮಕಿ ನಡೆಯುತ್ತಲೇ ಇದೆ. ಈ ನಡುವೆ ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಿ ಸರಕಾರ ಆದೇಶಿಸಿದ್ದು, ತನಿಖೆ ಚುರುಕುಗೊಂಡಿದೆ.