ಪೋರ ಬಂದರ್: ದಿನನಿತ್ಯದ ತರಬೇತಿ ಸಂದರ್ಭದಲ್ಲಿ ಧ್ರುವ ಹೆಲಿಕಾಪ್ಟರ್ ಪತನವಾಗಿ ಮೂವರು ಕೋಸ್ಟರ್ ಗಾರ್ಡ್ಸ್ ಯೋಧರು ಮೃತಪಟ್ಟಿರುವ ಘಟನೆ ನಡೆದಿದೆ.
ಗುಜರಾತಿನ ಪೋರಬಂದರ್ ನೌಕಾನೆಲೆಯಲ್ಲಿ ಧ್ರುವ ಹೆಲಿಕಾಪ್ಟರ್ ಮೂಲಕ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಹೆಲಿಕಾಪ್ಟರ್ ಪತನವಾಗಿದೆ. ಹೆಲಿಕಾಪ್ಟರ್ ನಲ್ಲಿದ್ದ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.
ಹುತಾತ್ಮರಾದವರಲ್ಲಿ ಇಬ್ಬರು ಧ್ರುವ ಹೆಲಿಕಾಪ್ಟರ್ ಪೈಲೆಟ್ ಗಳು ಹಾಗೂ ಒಮ್ಮೊಬ್ಬ ಸಿಬ್ಬಂದಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಗಳು ಸಿಗಬೇಕಿದೆ ಎಂದು ನೌಕಾಪಡೆಯ ಹಿರಿಯ ಅಧಿಕಾರಿಗಳು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.