ಉಪಯುಕ್ತ ಸುದ್ದಿ

ಬೆಂಗಳೂರು ಬೆಂಗಳೂರು ಚಳಿ…ಚಳಿ…: ನಗರವನ್ನು ನಡುಗಿಸುತ್ತಿದೆ ಶೀತಗಾಳಿ

Share It

ಬೆಂಗಳೂರು: ಶನಿವಾರದಿಂದ ಹಾಸಿಗೆಯಿಂದ ಮೇಲೇಳಲು ಮನಸ್ಸಾಗುತ್ತಿಲ್ಲ, ಗಡಗಡ ನಡುಗುವ ಚಳಿ ನಗರದ ಜನರನ್ನು ಸೋಮಾರಿಗಳನ್ನಾಗಿಸಿದೆ. ಎದ್ದು ಓಡಾಡುವವರಿಗೆ ಗಟ್ಟಿ ಜರ್ಕೀನ್‌ಗಳು ಆಸರೆಯಾಗುತ್ತಿವೆ.

ನಗರದಲ್ಲಿ ಚಳಿ ಅದೆಷ್ಟರ ಮಟ್ಟಿಗೆ ಕಾಟ ಕೊಡುತ್ತಿದೆ ಎಂಬುದಕ್ಕೆ ಇದೆಲ್ಲ ಉದಾಹರಣೆಗಳು. ನಗರದಲ್ಲಿ ಎರಡು ದಿನದಿಂದ ಚಳಿಯ ಪ್ರಮಾಣ ವಿಪರೀತ ಹೆಚ್ಚಾಗುತ್ತಿದೆ. ಶೀತಗಾಳಿ ಜನರನ್ನು ತಣ್ಣಗಾಗಿಸಿದೆ. ಇದಕ್ಕೆಲ್ಲ ಕಾರಣ ಹವಾಮಾನದ ವೈಪರೀತ್ಯದಿಂದ ಚಳಿಯ ಪ್ರಮಾಣ ವಿಪರೀತ ಹೆಚ್ಚಾಗಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಶನಿವಾರ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14.93 ಡಿಗ್ರಿ ದಾಖಲಾಗಿದೆ. ಗರಿಷ್ಠ ತಾಪಮಾನ 21.77 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಗರದಲ್ಲಿ ಕಳೆದ 14 ವರ್ಷಗಳ ನಂತರ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಪ್ರಮಾಣದ ತಾಪಮಾನ ದಾಖಲಾಗಿದೆ. ಈ ಹಿಂದೆ ಜನವರಿ 2012 ರಲ್ಲಿ 12 ಡಿಗ್ರಿ, 2019 ಜನವರಿಯಲ್ಲಿ 12.3 ಡಿಗ್ರಿ ತಾಪಮಾನ ದಾಖಲಾಗಿತ್ತು.

ಮುಂದಿನ ಮತ್ತೆರೆಡು ದಿನಗಳಲ್ಲಿ ಮತ್ತಷ್ಟು ಚಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಗರದಲ್ಲಿ ಅತ್ಯಂತ ದಾಖಲೆಯ ಕನಿಷ್ಠ ತಾಪಮಾನ ಜ.13, 1884 ರಲ್ಲಿ ದಾಖಲಾಗಿತ್ತು. ಆಗ 7.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಈವರೆಗೆ ದಾಖಲೆಯಾಗಿದೆ.

ನಗರದಲ್ಲಿ ಮುಂದಿನ ಕೆಲ ದಿನಗಳಲ್ಲಿ ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಕನಿಷ್ಠ ದಾಖಲೆಯ ಸಮೀಪಕ್ಕೆ ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್‌ನಲ್ಲಿ 12.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇನ್ನು ಒಂದು ವಾರ ಚಳಿಯ ವಾತಾವರಣ ಮುಂದುವರಿಯಲಿದೆ.


Share It

You cannot copy content of this page