ಬೆಂಗಳೂರು: ಸಿ.ಟಿ. ರವಿ ಅವರನ್ನು ಬಂಧಿಸಿ, ಬೆಳಗಾವಿಯಲ್ಲಿ ಸುತ್ತಾಡಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯಪಾಲರು ಸಿಎಂಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಸಿ.ಟಿ.ರವಿ ಅವರನ್ನು ಪೊಲೀಸರು, ಅಕ್ರಮವಾಗಿ ಬಂಧಿಸಿ, ಅಪಾಯಕಾರಿ ಸ್ಥಳಗಳಲ್ಲಿ ಸುತ್ತಾಡಿಸಿದ್ದಾರೆ ಎನ್ನಲಾಗಿದೆ. ಇದು ಜನಪ್ರತಿನಿಧಿಗಳನ್ನು ಪೊಲೀಸರು ಕೆಟ್ಟದಾಗಿ ನಡೆಸಿಕೊಂಡಿರುವುದಕ್ಕೆ ಒಂದು ಉದಾಹರಣೆ. ಹೀಗಾಗಿ, ಪ್ರಕರಣದ ಸಂಬAಧ ಸೂಕ್ತ ತನಿಖೆ ನಡೆಸಿ, ನಮಗೆ ವರದಿ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯಪಾಲರ ಪತ್ರ ಸಿಎಂ ಕಚೇರಿ ತಲುಪಿ ಈಗಾಗಲೇ ಒಂದು ವಾರ ಕಳೆದಿದ್ದರೂ, ಸಿಎಂ ಕಚೇರಿಯಿಂದ ಯಾವುದೇ ಪ್ರತ್ಯುತ್ತರ ಸಿಕ್ಕಿಲ್ಲ ಎನ್ನಲಾಗಿದೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಪಾಲರ ಪತ್ರಕ್ಕೂ ಬೆಲೆ ನೀಡದೆ ಕಾಂಗ್ರೆಸ್ ಸರಕಾರ ತನ್ನ ಉದ್ದೇಶವೇನು ಎಂಬುದನ್ನು ಸಾಭೀತುಪಡಿಸಿದೆ.