ವೆಲ್ಲಿಂಗ್ಟನ್ : ಬಹು ನಿರೀಕ್ಷಿತ ಚಾಂಪಿಯನ್ ಟ್ರೋಫಿಯ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದು ನ್ಯೂಜಿಲ್ಯಾಂಡ್ ಹೊಸ ನಾಯಕನೊಂದಿಗೆ ತಂಡವನ್ನು ಪ್ರಕಟಿಸಿದೆ.
ಅಲ್ಲದೇ ತಂಡದಲ್ಲಿ ಅನುಭವಿ ಆಟಗಾರರು ಸ್ಥಾನ ಪಡೆದಿದ್ದಾರೆ. ಅಷ್ಟಕ್ಕೂ ತಂಡದ ಹೊಸ ನಾಯಕ ಯಾರು ಎಂಬುದನ್ನು ಕೆಳಗಿನಂತೆ ನೋಡೋಣ ಬನ್ನಿ.
ಇದೇ ಮೊದಲ ಬಾರಿಗೆ ಮಿಚೆಲ್ ಸ್ಯಾಂಟ್ನರ್ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಅವರ ಮೊದಲ ಐಸಿಸಿ ಟೂರ್ನಿಯ ನಾಯಕತ್ವವಾಗಲಿದೆ. ಇವರಿಗೆ ಸಾಥ್ ನೀಡಲು ತಂಡದಲ್ಲಿ ಅನುಭವಿ ಆಟಗಾರರಾದ ಕೇನ್ ವಿಲಿಯಮ್ಸನ್, ಡೆವೊನ್ ಕಾನ್ವೇ ಮತ್ತು ಲಾಕಿ ಫರ್ಗುಸನ್ ಇರಲಿದ್ದಾರೆ.
ಮೊಣಕಾಲಿನ ಗಾಯದಿಂದ ತಂಡದಿಂದ ಹೊರ ಉಳಿದಿದ್ದ ಬೆನ್ ಸಿಯರ್ಸ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲ್ಯಾಂಡ್ ತಂಡ ತನ್ನ ಬೌಲಿಂಗ್ ಲೈನ್ ಆಫ್ ನಲ್ಲಿ ಸ್ಥಿರತೆಯನ್ನು ತರಲು ಒ’ರೂರ್ಕ್ ಮತ್ತು ನಾಥನ್ ಸ್ಮಿತ್ ಗೆ ಅವಕಾಶ ನೀಡಿದೆ. ಇವರಿಬ್ಬರಿಗೂ ಇದೇ ಮೊದಲ ಐಸಿಸಿ ಟೂರ್ನಿಯಾಗಿದ್ದು ಚೊಚ್ಚಲ ಪದ್ಯವಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಬಳಿಕ ಬಾಂಗ್ಲಾದೇಶ ಮತ್ತು ಭಾರತದ ವಿರುದ್ಧ ಆಡಲಿದೆ.
ನ್ಯೂಜಿಲ್ಯಾಂಡ್ ತಂಡ ಹೀಗಿದೆ: ನಾಯಕನಾಗಿ ಮಿಚೆಲ್ ಸ್ಯಾಂಟ್ನರ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಬೆನ್ ಸಿಯರ್ಸ್, ವಿಲ್ ಒ’ರೂರ್ಕ್,ವಿಲ್ ಯಂಗ್, ಡೆವೊನ್ ಕಾನ್ವೇ, ರಾಚಿನ್ ರವೀಂದ್ರ, ಕೇನ್ ವಿಲಿಯಮ್ಸನ್,ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್,