ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರವು ತನ್ನಲ್ಲಿ ಖಾಲಿ ಇರುವ 89 ಹುದ್ದೆಗಳಿಗೆ ಅರ್ಜಿ ಕರೆದಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ ಹಾಗೂ ವೇತನದ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.
ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರವು ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಕರೆದಿದೆ. ಹುದ್ದೆಗೆ ಸಂಬಂಧಿಸಿದ ಹಾಗೂ ಅರ್ಜಿಯನ್ನು ಸಲ್ಲಿಸಲು aai.aero ಗೆ ಭೇಟಿ ನೀಡಿ.
ಅರ್ಹತೆಗಳು : ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು SSLCಯಲ್ಲಿ ಪಾಸ್ ಆಗಿರಬೇಕು. ಜೊತೆಗೆ ಅಟೋಮೊಬೈಲ್ , ಮೆಕ್ಯಾನಿಕಲ್ , ಅಗ್ನಿಶಾಮಕ ವಿಭಾಗದಲ್ಲಿ 3 ವರ್ಷದ ಪದವಿ ಮುಗಿಸಿರಬೇಕು.
ಆಯ್ಕೆಯ ಹಂತಗಳು : ಮೊದಲನೇ ಹಂತದಲ್ಲಿ ಕಂಪ್ಯೂಟರ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಒಬಿಸಿ ವರ್ಗದವರು 100ಕ್ಕೆ ಶೇಕಡಾ 50 ರಷ್ಟು ಅಂಕಗಳನ್ನು ಗಳಿಸಬೇಕು. Sc ಮತ್ತು st ವರ್ಗದವರು ಶೇಕಡಾ 40 ರಷ್ಟು ಅಂಕವನ್ನು ಪಡೆದರೆ ಸಾಕು. ಪರೀಕ್ಷೆಗೆ 2 ಗಂಟೆಗಳ ಸಮಯ ನೀಡಲಾಗುತ್ತದೆ.
ಎರಡನೆಯ ಹಂತದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣವಾದ ಬಳಿಕ ಪ್ರಮಾಣ ಪತ್ರಗಳ ಪರಿಶೀಲನೆ, ದೈಹಿಕ ಪರಿಶೀಲನೆ ಹಾಗೂ ವಾಹನ ಚಾಲನ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿ ಶೇಕಡಾ 60 ರಷ್ಟು ಅಂಕಗಳನ್ನು ಗಳಿಸಬೇಕು. ನಂತರ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.
ವೇತನ : 31,000 – 92,000 ಸಿಗಲಿದೆ.