ಅಪರಾಧ ಸುದ್ದಿ

ಎಟಿಎಂಗೆ ತುಂಬುವ ಹಣ ಎಗರಿಸಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

Share It

ಮೈಸೂರು: ಎಟಿಎಂಗೆ ತುಂಬುವ ಹಣವನ್ನು ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ಎಫ್‌ಐಆರ್ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಹುಣಸೂರು ತುರಗನೂರು ಗ್ರಾಮದ ಅಕ್ಷಯ್ ಹಾಗೂ ತೇಜಸ್ವಿನಿ ಬಂಧಿತರು.

ಅಕ್ಷಯ್ ಕುಮಾರ್ ಟಿಎಲ್ ಎಂಟರ್ಪ್ರೈಸಸ್ ನಲ್ಲಿ ಎಟಿಎಂಗೆ ಹಣ ತುಂಬುವ ವಾಹನದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಆಗಾಗ ಹಣ ಎಗರಿಸುವುದನ್ನು ಮಾಡಿಕೊಂಡು ಬಂದಿದ್ದ. ಎಚ್.ಡಿ.ಕೋಟೆ ತಾಲೂಕಿನ ಗದ್ದಿಗೆ ಗ್ರಾಮದಲ್ಲಿ ಹಣ ತುಂಬುವಾಗ 5.8 ಲಕ್ಷ ರು.ಹಣವನ್ನು ಲೋಡ್ ಮಾಡದೆ, ಎಗರಿಸಿ ಪರಾರಿಯಾಗಿದ್ದ.

ಈ ಸಂಸ್ಥೆ ಮೈಸೂರಿನ 16 ಎಟಿಎಂಗಳಿಗೆ ಹಣ ತುಂಬಿಸುವ ಹೊಣೆಯನ್ನು ಹೊತ್ತುಕೊಂಡಿದೆ. ಸಂಸ್ಥೆ ಹಣ ಆಡಿಟ್ ಮಾಡುವ ವೇಳೆ ವ್ಯತ್ಯಾಸದ ಶಂಕೆ ಬಂದಿದ್ದು, ಕ್ಯಾಶ್ ಲೋಡಿಂಗ್ ವೇಳೆ ಈತ ಹಣ ಎಗರಿಸಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆ ಅಕ್ಷಯ್ ಕುಮಾರ್ ವಿರುದ್ಧ ದೂರು ನೀಡಿತ್ತು.

ಆರೋಪಿಯ ಬೆನ್ನುಹತ್ತಿದ ಪೊಲೀಸರು, ಆತನಿಗೆ ಸಹಾಯ ಮಾಡಿದ ತೇಜಸ್ವಿನಿಯನ್ನು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಅಕ್ಷಯ್ ಕುಮಾರ್, ಹುಣಸೂರು ತಾಲೂಕಿನ ತುರುಗನೂರು ಗ್ರಾಮದಲ್ಲಿ ಸ್ನೇಹಿತರ ಜತೆಗೆ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಅಕ್ಷಯ್ ಕುಮಾರ್ ಮತ್ತು ಸ್ನೇಹಿತರು, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ ನಡೆಸಿದರು ಎನ್ನಲಾಗಿದೆ. ಕೆಲಕಾಲ ವಾಗ್ವಾದದ ಬಳಿಕ ಪೊಲೀಸರ ವಶಕ್ಕೆ ಆತನನ್ನು ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.


Share It

You cannot copy content of this page