ಕ್ರೀಡೆ ಸುದ್ದಿ

ಬರೋಬ್ಬರಿ 7ವರ್ಷ ಬಳಿಕ ಶತಕ ಭಾರಿಸಿದ ಭಾರತೀಯ ಆಟಗಾರ್ತಿ

Share It

ದುಬೈ: ಭಾರತದ ಮಹಿಳಾ ತಂಡದ ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಐಸಿಸಿ ಏಕದಿನ ಪಟ್ಟಿಯಲ್ಲಿ 19 ನೇ ಸ್ಥಾನಕ್ಕೆ ಏರಿದ್ದಾರೆ. ಬರೋಬ್ಬರಿ ಏಳು ವರ್ಷಗಳ ನಂತರ ಶತಕ ಸಿಡಿಸುವಲ್ಲಿ ಜೆಮಿಮಾ ಯಶಸ್ವಿಯಾಗಿದ್ದಾರೆ.

ಜೆಮಿಮಾ ಇತ್ತೀಚೆಗೆ ರಾಜ್ ಕೋಟ್ ನಲ್ಲಿ ನಡೆದ ನೆದರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 102 ರನ್ ಬಾರಿಸುವ ಮೂಲಕ ತಮ್ಮ 7 ವರ್ಷದ ಶತಕದ ಕನಸನ್ನು ನನಸು ಮಾಡಿಕೊಂಡರು. ಇವರ ಅಬ್ಬರದ ಆಟದಿಂದ ಭಾರತ ತಂಡವು ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಲು ಸಹಾಯವಾಯಿತು. ಒಟ್ಟು 370 ರನ್ ಕಲೆ ಹಾಕಿದರು.

ಸದ್ಯ ಭಾರತವು ಈ ಪಂದ್ಯವನ್ನು ಗೆಲ್ಲುವ ಮೂಲಕ 2-0 ಅಂತರವನ್ನು ಕಾಯ್ದುಕೊಂಡಿದೆ. ಇನ್ನು ಭಾರತೀಯ ಆಟಗಾರ್ತಿ ಮಂದಾನ 3 ನೇ ಸ್ಥಾನದಲ್ಲಿ ನೆಲೆಯೂರಿದ್ದಾರೆ.


Share It

You cannot copy content of this page