ಮುಂಬೈ: ಬಾಲಿವುಡ್ ನಟ ಸೈಫ್ ಆಲೀಖಾನ್ ಮೇಲೆ ಕೊಲೆ ಯತ್ನ ನಡೆಸಿದ ಆರೋಪಿ, ಸಿಕ್ಕಿಬಿದ್ದಿದ್ದು ಆತ ಬಾಂಗ್ಲಾ ಮೂಲದವನು ಎಂಬ ವಿಷಯವನ್ನು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದು, ಆತನನ್ನು ವಿಜಯ್ ದಾಸ್ ಎಂದು ಗಉರುತಿಸಲಾಗಿತ್ತು. ಈತ ಮೂಲತಃ ಬಾಂಗ್ಲಾ ಮೂಲದವನಾಗಿದ್ದು, ಅಕ್ರಮವಾಗಿ ಭಾರತಕ್ಕೆ ಬಂದು, ಕೊಲ್ಕತ್ತಾ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಸಂಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತಕ್ಕೆ ಬರುವ ಮೊದಲು ಆರೋಪಿಯ ಮೂಲ ಹೆಸರು ಮೊಹಮದ್ ಷರೀಪುಲ್ ಎಂದು ಗೊತ್ತಾಗಿದೆ. ಭಾರತಕ್ಕೆ ಬಂದ ಮೇಲೆ ಆತ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಎನ್ನಲಾಗಿದೆ. ಆತನ ಮೂಲದ ಕುರಿತು ಪೂರಕ ದಾಖಲೆಗಳು ಸಿಕ್ಕಿವೆ ಎಂದು ಮುಂಬೈ ಪೊಲೀಸರು ಮಾಹಿತಿ ಹಂಚಿಕೊAಡಿದ್ದಾರೆ.
ಪ್ರಕರಣದ ಸಂಬAಧ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಅನಂತರ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ. ಪ್ರಕರಣದಲ್ಲಿ ಈತನ ಜತೆಗೆ ಮತ್ಯಾರು ಕೈಜೋಡಿಸಿದ್ದಾರೆ. ಈತನ ಹಿಂದೆ ಯಾರಿದ್ದಾರೆ ಎಂಬೆಲ್ಲ ಮಾಹಿತಿಯನ್ನು ಕಲೆಹಾಕಬೇಕಿದೆ ಎಂದು ಮುಂಬೈ ಮಹಾನಗರ ವಿಭಾಗ ೯ರ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.