ನವದೆಹಲಿ : ಲಕ್ನೋ ತಂಡದಿಂದ ಕನ್ನಡಿಗ ಕೆ. ಎಲ್ ರಾಹುಲ್ ನನ್ನು ಕೈ ಬಿಟ್ಟು ಹೊಸ ನಾಯಕನಿಗೆ ಹುಡುಕಾಟ ನಡೆಸಿ ರಿಷಬ್ ಪಂತ್ ನನ್ನು ಕೊಂಡು ಕೊಂಡ ಲಕ್ನೋ ಪಂತ್ ರನ್ನು ನಾಯಕರನ್ನಾಗಿ ಮಾಡಲಾಗುವುದು ಎಂದು ವರದಿಯಾಗಿದೆ.
ಹೌದು 2025 ಐಪಿಎಲ್ ಕಳೆದ ಸೀಸನ್ ಗಿಂತ ಇನ್ನಷ್ಟು ರನ್ ಮಳೆ ಸುರಿಯಲಿದೆ ಎಂದು ಅಭಿಮಾನಿಗಳು ಲೆಕ್ಕಾಚಾರ ಮಾಡುತ್ತಿದ್ದಾರೆ.
ರಾಹುಲ್ ಎರಡು ಬಾರಿ ತಂಡವನ್ನು ಪ್ಲೇ ಆಫ್ ಗೆ ಕರೆದುಕೊಂಡು ಹೋದರು ಕಪ್ ಗೆಲ್ಲಲು ಸಾಧ್ಯವಾಗದ ಕಾರಣ ಕಳೆದ ಹರಾಜಿನಲ್ಲಿ ಅವರನ್ನು ಕೈ ಬಿಟ್ಟು 27 ಕೋಟಿಯ ಬೃಹತ್ ಮೊತ್ತವನ್ನು ಕೊಟ್ಟು ಪಂತ್ ತನ್ನು ಲಕ್ನೋ ತಂಡ ಖರೀದಿ ಮಾಡಿತ್ತು.
ಅಲ್ಲದೇ ರಾಹುಲ್ ಹಾಗೂ ಲಕ್ನೋ ತಂಡದ ಮಾಲೀಕ ಸಂಜೀವ್ ರೊಡನೆ ಸಣ್ಣ ಗೊಂದಲಗಳು ಹಾಗೂ ಭಿನ್ನಾಭಿಪ್ರಾಯಗಳು ಏರ್ಪತ್ತಿದ್ದವು. ಒಟ್ಟಾರೆಯಾಗಿ ಸದ್ಯ ತಂಡದ ನಾಯಕ ಸ್ಥಾನಕ್ಕೆ ಪಂತ್ ಪಕ್ಕ ಫಿಕ್ಸ್ ಎಂದು ವರದಿಯಾಗಿದೆ.