ರಾಜಸ್ತಾನ : ಕರ್ತವ್ಯ ಪ್ರಜ್ಞೆ ಮರೆತ ಹೆಡ್ ಮಾಸ್ಟರ್ ತನ್ನ ಸಹೋದ್ಯೋಗಿ ಶಿಕ್ಷಕಿಯೊಂದಿಗೆ ಶಾಲೆಯಲ್ಲಿ ರೊಮ್ಯಾನ್ಸ್ ಮಾಡುತ್ತಿದ್ದ ಘಟನೆ ರಾಜಸ್ಥಾನದ ಚಿತ್ತೂರ್ ಘಡ ಜಿಲ್ಲೆಯಲ್ಲಿ ನಡೆದಿದೆ.
ಶಾಲೆಯು ಜ್ಞಾನದ ದೇಗುಲ. ಅಲ್ಲಿ ಇಂತಹ ನೀಚ ಕೃತ್ಯಕ್ಕೆ ಕೈ ಹಾಕಿರುವ ಹೆಡ್ ಮಾಸ್ಟರ್ ಗೆ ಏನ್ ಅನ್ನಬೇಕು ನೀವೇ ಹೇಳಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲೇಡಿ ಟೀಚರ್ ಜೊತೆ ಮುದ್ದಾಡುತ್ತಿದ್ದ ವಿಡಿಯೋ ಶಾಲೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಸ್ಥಳೀಯರು ಇಬ್ಬರನ್ನು ಅಮಾನತ್ತು ಮಾಡುವಂತೆ ಆಗ್ರಹ ಮಾಡಿದ್ದಾರೆ.ಇಂತಹ ಶಿಕ್ಷಕರು ನಮ್ಮ ಮಕ್ಕಳಿಗೆ ಏನು ಕಲಿಸಲು ಸಾಧ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.