ಬೆಂಗಳೂರು: ಮೆಟ್ರೋ ಹಳೆಯ ಮೇಲೆ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ್ತೊಂದು ಅಂತಹದ್ದೇ ಪ್ರಕರಣ ಇಂದು ವರದಿಯಾಗಿದೆ.
ನಮ್ಮ ಮೆಟ್ರೋದ ಗ್ರೀನ್ ಲೈನ್‌ನ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಮೆಟ್ರೋ ರೈಲು ಆಗಮಿಸುವ ವೇಳೆಯಲ್ಲಿ ಹಳಿಯ ಮೇಲೆ ಜಿಗಿದಿದ್ದು, ಎರಡು ಹಳಿಯ ನಡುವೆ ಅಡ್ಡಲಾಗಿ ಮಲಗಿದ್ದ ಎನ್ನಲಾಗಿದೆ.
ತಕ್ಷಣವೇ ಎಚ್ಚೆತ್ತುಕೊಂಡ ಮೆಟ್ರೋ ಭದ್ರತಾ ಸಿಬ್ಬಂದಿ, ರೈಲು ನಿಲ್ಲಿಸಿ ನಂತರ ಆತನನ್ನು ರಕ್ಷಣೆ ಮಾಡಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದೀಗ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.