ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸಂದರ್ಭದಲ್ಲಿ ದರ್ಶನ್ ಮನೆಯಲ್ಲಿ ಸಿಕ್ಕಿದ್ದ 37 ಲಕ್ಷ ಹಣ ವಾಪಸ್ ಕೋರಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಫೆ.೧ಕ್ಕೆ ಮುಂದೂಡಿದೆ.
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬಂಧನವಾದ ಸಂದರ್ಭದಲ್ಲಿ ಅವರ ಮನೆಯಿಂದ ಪೊಲೀಸರು 37 ಲಕ್ಷ ರು ಹಣವನ್ನು ಸೀಜ್ ಮಾಡಿದ್ದರು. ಪೊಲೀಸರು, ಕೊಲೆಯನ್ನು ಮುಚ್ಚಿಹಾಕಲು ಇಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್, ಸೀಜ್ ಮಾಡಿರುವ ಹಣವನ್ನು ವಾಪಸ್ ನೀಡುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ದರ್ಶನ್ ಪರ ವಕೀಲರು ಹಣವು ನ್ಯಾಯಬದ್ಧವಾದುದ್ದಾಗಿದ್ದು, ವಾಪಸ್ ಕೊಡಬೇಕು ಎಂದು ಮನವಿ ಮಾಡಿದ್ದರು. ದರ್ಶನ್ ಪರ ವಕೀಲರ ಮನವಿ ಆಲಿಸಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಫೆ. 1 ಕ್ಕೆ ಮುಂದೂಡಿದೆ.