ಒಕ್ಕಲಿಗ ಸಮುದಾಯ ನಾಯಕತ್ವ ಗೌಡರ ಕುಟುಂಬದ ಕೈತಪ್ಪುತ್ತಾ?
ವೈಟ್ಹೌಸ್ ವಿಶೇಷ
ಬೆಂಗಳೂರು
ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಬೀಗುತ್ತಿರುವ ಜೆಡಿಎಸ್ ನಾಯಕರು ಹಳೇ ಮೈಸೂರು ಭಾಗದಲ್ಲಿದ್ದ ಒಕ್ಕಲಿಗ ಸಮುದಾಯದ ನಾಯಕತ್ವದ ಮೇಲಿನ ಹಿಡಿತವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆಯೇ?
ಎಂಬತ್ತರ ದಶಕದಿಂದಲೂ ಒಕ್ಕಲಿಗ ಸಮುದಾಯದ ಅಸ್ಮಿತೆಯಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಕೀಯ ಮಾಡಿದರು. ಅವರಿಗಿಂದ ಮೊದಲು ಕೆಲವು ಒಕ್ಕಲಿಗ ನಾಯಕರು ರಾಜಕೀಯದಲ್ಲಿದ್ದರೂ, ದೇವೇಗೌಡರ ನಂತರವೇ ಒಕ್ಕಲಿಗ ಸಮುದಾಯಕ್ಕೆ ರಾಜಕೀಯ ಅಸ್ಮಿತೆ ಸೃಷ್ಟಿಯಾಯಿತು ಎಂದರೆ ತಪ್ಪಾಗದು. ಆದರೆ, ಇತ್ತೀಚೆಗೆ ಆ ನಾಯಕತ್ವ ಸಡಿಲಗೊಳ್ಳುತ್ತಿರುವ ಲಕ್ಷಣಗಳು ಕಾಣಿಸುತ್ತಿದ್ದು, 2024 ರ ಲೋಕಸಭೆ ಚುನಾವಣೆಯಲ್ಲಿ ಈ ಹಿಡಿತ ಮತ್ತಷ್ಟು ಸಡಿಲವಾಗುವ ಸಾಧ್ಯತೆಗಳಿವೆ.
ಕಳೆದ ಲೋಕಸಭೆ ಚುನಾವಣೆಯಲ್ಲಿಯೇ ಮಾಜಿ ಪ್ರಧಾನಿ ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದರು. ಇದೀಗ ಒಕ್ಕಲಿಗ ಪ್ರಾಬಲ್ಯದ ಎರಡು ಕ್ಷೇತ್ರಗಳಲ್ಲಿ ಮತ್ತು ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಸ್ಪಧರ್ೆ ಮಾಡುತ್ತಿದೆ. ಕೋಲಾರ ಮೀಸಲು ಕ್ಷೇತ್ರವಲ್ಲದಿದ್ದರೆ, ಅಲ್ಲಿಂದಲೂ ಗೌಡರ ಕುಟುಂಬದ ಒಬ್ಬ ಸದಸ್ಯರೇ ಸ್ಪಧರ್ೆ ಮಾಡುತ್ತಿದ್ದರೂ ಎಂಬ ಟೀಕೆ ಪಕ್ಷದ ವಲಯದಲ್ಲಿದೆ. ಏಕೆಂದರೆ, ಉಳಿದ ಎರಡು ಕ್ಷೇತ್ರಗಳಲ್ಲಿ ಸ್ಪಧರ್ೆ ಮಾಡಿರುವುದು ದೇವೇಗೌಡ ಕುಟುಂಬದ ಎರಡು ಕುಡಿಗಳೇ.
ಇಂತಹ ಕುಟುಂಬ ರಾಜಕಾರಣ ಜೆಡಿಎಸ್ ಮೇಲೆ ದಕ್ಷಿಣ ಭಾರತದ ಒಕ್ಕಲಿಗ ಸಮುದಾಯಕ್ಕಿದ್ದ ನಂಬಿಕೆಯನ್ನು ಅಲುಗಾಡಿಸಿದೆ. ಇದು ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಸಾಭೀತಾಗಿದೆ. ಈ ನಡುವೆ ಜೆಡಿಎಸ್ ನಾಯಕರು ಬಿಜೆಪಿ ಜತೆಗೆ ಮಾಡಿಕೊಂಡಿರುವ ಮೈತ್ರಿ, ಕೋಮುವಾದವನ್ನು ವಿರೋಧಿಸುವ ಒಕ್ಕಲಿಗ ಸಮುದಾಯ ಜೆಡಿಎಸ್ ಮತ್ತು ಗೌಡರ ಕುಟುಂಬ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತಿದೆ. ಹೀಗಾಗಿ, ಈ ಭಾಗದ ಒಕ್ಕಲಿಗ ಸಮುದಾಯ ದೇವೇಗೌಡರಿಗೆ ಪಯರ್ಾಯ ನಾಯಕನನ್ನು ಹುಡುಕಿಕೊಳ್ಳುವ ಪ್ರಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಸಮುದಾಯದ ಸಾರ್ವಭೌಮ ನಾಯಕನೆನೆಸಿಕೊಳ್ಳುವ ಎಲ್ಲ ಲಕ್ಷಣಗಳನ್ನು ಸಮುದಾಯದ ಮುಂದಿಡುತ್ತಿದ್ದಾರೆ.
ಎಸ್.ಎಂ.ಕೃಷ್ಣ ಶಿಷ್ಯರಾಗಿಯೇ ರಾಜಕೀಯದಲ್ಲಿ ಬೆಳೆದರೂ ಡಿಕೆಶಿ, ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸಮುದಾಯದ ನಾಯಕರಾಗುವ ಪ್ರಯತ್ನ ಮಾಡಿದರು. ದೇವೇಗೌಡ ಕುಟುಂಬಕ್ಕೆ ಸಮುದಾಯದ ಮೇಲಿದ್ದ ಹಿಡಿತವನ್ನು ತಮ್ಮ ರಾಜಕೀಯ ಜೀವನದ ಮೊದಲಿಂದಲೂ ತಡೆಯುವ ಪ್ರಯತ್ನ ನಡೆಸುತ್ತಿದ್ದ ಅವರು, ಇದೀಗ ಅದನ್ನು ಪುಡಿಪುಡಿ ಮಾಡುವ ಹಂತಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹಲೇ ಮೈಸೂರು ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೋಲಿಸಲು ಹೆಣೆದಿರುವ ತಂತ್ರಗಾರಿಕೆ ಮತ್ತು ಆಯ್ಕೆ ಮಾಡಿರುವ ಅಭ್ಯಥರ್ಿಗಳಿಂದಲೇ ಡಿಕೆಶಿ ಅವರ ಸಮುದಾಯದ ಮೇಲಿನ ಹಿಡಿತದ ಅರಿವಾಗುತ್ತದೆ.
ಸಿಎಂ ಸಿದ್ದರಾಮಯ್ಯ ಅವರಿಂದಲೂ ಸಾಥ್ !
ಮೊದಲಿಗೆ ಅಧಿಕಾರಕ್ಕಾಗಿ ಮುನಿಸಿಕೊಂಡಿದ್ದ ಡಿಕೆಶಿ-ಸಿದ್ದರಾಮಯ್ಯ ಇತ್ತೀಚಿನ ದಿನಗಳಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ವೈರಿ ದೇವೇಗೌಡರ ಕುಟುಂಬ ಹಣಿಯಲು ತಮ್ಮ ಪಕ್ಷದಲ್ಲಿ ಡಿಕೆಶಿ ಅವರನ್ನು ಪಯರ್ಾಯ ನಾಯಕರನ್ನಾಗಿ ಬೆಳೆಸುವುದು ಅನಿವಾರ್ಯ ಎಂದು ಸಿದ್ದರಾಮಯ್ಯ ಅರಿತಿದ್ದು, ಅದನ್ನು ಸಾಕಾರ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯವನ್ನು ಡಿಕೆಶಿ ಮೂಲಕವೇ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನುಳಿದಂತೆ ದಲಿತರು ಮತ್ತು ಅಲ್ಪಸಂಖ್ಯಾತರು ಬಿಜೆಪಿ ಜತೆಗೆ ಹೋಗುವುದಿಲ್ಲ. ಹಿಂದುಳಿದ ವರ್ಗವೂ ಕೂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ನ ಕೈಹಿಡಿಯಲಿದೆ. ಇನ್ನುಳಿದಂತೆ ಹಳೇ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ಸಮುದಾಯ ಡಿಕೆಶಿ ಮೂಲಕ ಕಾಂಗ್ರೆಸ್ಗೆ ಬಂದರೆ, ಪಕ್ಷವೂ ಬಲಗೊಳ್ಳಲಿದೆ. ದೇವೇಗೌಡರ ಕುಟುಂಬದ ಹಿಡಿತವೂ ಕೈತಪ್ಪಲಿದೆ ಎಂಬ ಲೆಕ್ಕಾಚಾರ ಅವರದ್ದು.
ಗೌಡರ ಕುಟುಂಬದ ಹಿಡಿತ ಕೈತಪ್ಪಲು ಕಾರಣ
- ಅತಿಯಾದ ಕುಟುಂಬ ರಾಜಕಾರಣ ಮಾಡುವುದು
- ವಲಸೆ ಅಭ್ಯಥರ್ಿಗಳಾಗಿ ಚುನಾವಣೆಯಲ್ಲಿ ಸ್ಪಧರ್ೆ
- ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಜ್ಯಾತ್ಯಾತೀತ ತತ್ವ ಮರೆತಿದ್ದು
- ಅಧಿಕಾರ ಸಿಕ್ಕ ನಂತರ ಸಮುದಾಯದ ಏಳಿಗೆ ಮೆರೆತಿದ್ದು
ಡಿಕೆಶಿ ಪ್ರಾಬಲ್ಯಕ್ಕೆ ಕಾರಣ
- ಆರಂಭದಿಂದಲೂ ದೇವೇಗೌಡರ ಕುಟುಂಬಕ್ಕೆ ಪಯರ್ಾಯವಾಗಿ ಬೆಳೆದಿದ್ದು
- ಮೈತ್ರಿ ಸರಕಾರ ಪತನದ ವೇಳೆ ಎಚ್ಡಿಕೆ ಜತೆ ನಿಂತು, ಸಮುದಾಯದ ಮನಗೆದ್ದದ್ದು
- ಸಮುದಾಯವನ್ನು ಕಡೆಗಣಿಸದೆ, ಜತೆಯಲ್ಲಿ ತೆಗೆದುಕೊಂಡು ಹೋಗುತ್ತಿರುವುದು
- ಮುಂದಿನ ಮುಖ್ಯಮಂತ್ರಿ ಅಭ್ಯಥರ್ಿಯಾಗುವ ಎಲ್ಲ ಸಾಧ್ಯತೆಗಳಿರುವುದು