ನವದೆಹಲಿ : ಚಾಂಪಿಯನ್ಸ್ ಟ್ರೋಫಿಗೆ ಭಾರತವು ತನ್ನ ತಂಡವನ್ನು ಪ್ರಕಟಿಸಿದೆ. ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಟೀಂ ಇಂಡಿಯಾದ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ರೈನಾ ಹೇಳಿದ್ದೇನು ಎಂಬುದನ್ನ ನೋಡೋಣ ಬನ್ನಿ.
ಸ್ಟಾರ್ ಸ್ಪೋರ್ಟ್ಸ್ ಪ್ರೆಸ್‌ಕ್ಲಬ್‌ನಲ್ಲಿ ರೈನಾ ಮಾತನಾಡಿ ಟೀಂ ಇಂಡಿಯಾದ ಸೂರ್ಯ ಹಾಗೂ ಮೊಹಮದ್ ಸಿರಾಜ್‌ಗೆ ಸ್ಥಾನ ನೀಡಬೇಕಿತ್ತು. ಆಗ ತಂಡವು ಇನ್ನಷ್ಟು ಬಲಿಷ್ಠವಾಗುತ್ತಿತ್ತು ಎಂದು ಹೇಳಿದ್ದಾರೆ.
ಸೂರ್ಯ ಗ್ರೌಂಡ್‌ನ ಎಲ್ಲ ದಿಕ್ಕಿಗೂ ಬ್ಯಾಟ್ ಬಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅವರು ಪ್ರತಿ ಓವರ್‌ಗೆ ೯ ರನ್ ಕಲೆಹಾಕುವ ಸಾಮರ್ಥ್ಯ ಇದೆ. ೨೦೨೩ ರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಬಿರುಸಿನ ಆಟ ಎದುರಾಳಿಗಳಿಗೆ ಕಂಟಕ. ಸದ್ಯ ಟೀಮ್‌ನ ಟಾಪ್ ೩ ಈಗ ಫಾರಂನಲ್ಲಿ ಇಲ್ಲ. ಸೂರ್ಯ ಇದ್ದರೆ ಯಾವುದೇ ಕ್ರಮಾಂಕದಲ್ಲಿ ಬಲ ತುಂಬಲು ಸಾಧ್ಯವಾಗುತ್ತಿತ್ತು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಮೊಹಮದ್ ಸಿರಾಜ್ ಬಗ್ಗೆ ಮಾತನಾಡಿ , ಬುಮ್ರಾ ಫಿಟ್ ಇಲ್ಲದ ಕಾರಣ ತಂಡದಲ್ಲಿ ಆಡುವುದು ಕಷ್ಟ, ಯುವ ವೇಗಿಗಳು ಆಡಿದರೂ ಸಿರಾಜ್ ಅಲ್ಲಿ ಬೇಕಾಗುವ ಪರಿಸ್ಥಿತಿ ಬರುತ್ತದೆ. ಇನ್ನು ಸಮಯ ಇದೆ. ಸಿರಾಜ್ ತಂಡದೊಳಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.