ಅಪರಾಧ ಸುದ್ದಿ

ಆನ್‌ಲೈನ್ ಗೇಮ್ ಗೀಳಿಗೆ ಹಾಸನದಲ್ಲಿ ಮತ್ತು ಮತ್ತೊಂದು ಹೆಣ

Share It

ಹಾಸನ: ಆನ್‌ಲೈನ್ ಗೇಮಿಂಗ್ ಗೀಳು ಅನೇಕರನ್ನು ಬಲಿ ಪಡೆಯುತ್ತಿದೆ. ಇದೀಗ ಹಾಸನದಲ್ಲಿ ೨೬ ವರ್ಷದ ಯುವಕನೊಬ್ಬ ಆನ್‌ಲೈನ್ ಗೇಮಿಂಗ್ ಗೀಳಿಗೆ ಬಲಿಯಾಗಿದ್ದಾನೆ.

ಜಿಲ್ಲೆಯ ಚೀಕನಹಳ್ಳಿಯ ನಿವಾಸಿಯಾದ ರಾಕೇಶ್ ಗೌಡ ಹಾಸನದ ಲಾಡ್ಜ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರಾಕೇಶ್, ತನ್ನ ಸಾವಿಗೆ ತಾನು ಆನ್‌ಲೈನ್ ಗೇಮಿಂಗ್ ಹುಚ್ಚಿಗೆ ಬಿದ್ದು ಮಾಡಿಕೊಂಡಿದ್ದ ಸಾಲವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾನೆ.

ಬಸವರಾಜು ಎಂಬುವವರಿAದ 50 ಸಾವಿರ ರು.ಸಾಲ ಮಾಡಿದ್ದಾಗಿ, ಅದೇ ರೀತಿ ಇನ್ನು ಕೆಲವರಿ ಬಳಿ ಸಾಲ ಪಡೆದಿರುವುದಾಗಿ ಡೆತ್ ನೋಟ್‌ನಲ್ಲಿ ಆತ ತಿಳಿಸಿದ್ದಾನೆ. ಸಾಲ ತೀರಿಸಲು ಸಾಧ್ಯವಾಗದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾನೆ. ತನ್ನ ಅಪ್ಪ ಅಮ್ಮನ ಬಳಿ ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡಿದ್ದಾನೆ.

ಘಟನೆ ಸಂಬAಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


Share It

You cannot copy content of this page