ಅಪರಾಧ ಸುದ್ದಿ

ನಾಲ್ಕೂವರೆ ವರ್ಷದ ನಂತರ ಚಿಕ್ಕಮಗಳೂರು ದರೋಡೆ ಪ್ರಕರಣದ ಆರೋಪಿಗಳು

Share It

ಬೆಂಗಳೂರು: ನಾಲ್ಕೂವರೆ ವರ್ಷದ ಹಿಂದೆ ಚಿಕ್ಕಮಗಳೂರು ಕೇಸರಿ ಜುವೆಲ್ಲರಿಯಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳು ಚಿಕ್ಕಮಗಳೂರಿನಲ್ಲಿ 2020 ರಲ್ಲಿ ಜುಲೈ 11 ರಂದು ಕೇಸರಿ ಜುವೆಲ್ಲರಿಯಲ್ಲಿ ಮಾಲೀಕರ ಮೇಲೆ ಗುಂಡುಹಾರಿಸಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಅಲ್ಲಿ ಹಾರಿಸಿದ್ದ ಗುಂಡು ಮತ್ತು ಅವರ ಬಳಿ ಸಿಕ್ಕಿರುವ ಗನ್ ನ ಬುಲೆಟ್ ಮ್ಯಾಚ್ ಆಗಿದ್ದು, ಆರೋಪಿಗಳನ್ನು ನಾಲ್ಕೂವರೆ ವರ್ಷದ ನಂತರ ಪತ್ತೆಹಚ್ಚಲಾಗಿದೆ.

ಈ ಆರೋಪಿಗಳು 12 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಅವರ ಬಳಿ 334 ಗ್ರಾಂ ಚಿನ್ನದ ಘಟ್ಟಿ, 350 ಗ್ರಾಂ ಬೆಳ್ಳಿ, ಬೈಕ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡಿರುವ ಆರೋಪಿಗಳನ್ನು ಮಹದಮ್ ಕಬೀರ್ ಮತ್ತು ಬೆಂಗಳೂರು ಡಿಜೆ ಹಳ್ಳಿ ಮೂಲದ ನಿವಾಸಿ ಯೂಸಫ್ ಪಾಷಾ ಎಂದು ಗುರುತಿಸಲಾಗಿದೆ.


Share It

You cannot copy content of this page