ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟಿ 20 ಪಂದ್ಯಗಳು ಆರಂಭವಾಗಲಿವೆ. ತವರಿನಲ್ಲಿ ನಡೆಯುವ ಪಂದ್ಯಕ್ಕೆ ಭಾರತ ತಂಡವು ಪೂರ್ಣ ತಯಾರಿಯನ್ನು ಮಾಡಿಕೊಂಡಿದೆ. ಮೊದಲ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ ಸಿಟಿ ನಲ್ಲಿ ನಡೆಯಲಿದೆ. ಇನ್ನು ಉಳಿದ ನಾಲ್ಕು ಪಂದ್ಯಗಳು ಚೆನೈ, ರಾಜ್ ಕೋಟ್, ಮುಂಬೈ, ಪುಣೆ ಯಲ್ಲಿ ನಡೆಯಲಿವೆ.
ಸದ್ಯ ಭಾರತ ತಂಡವನ್ನು ಮಿಸ್ಟ್ರರ್ 360 ಎಂದೇ ಖ್ಯಾತಿ ಪಡೆದಿರುವ ಸೂರ್ಯ ಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಉಪ ನಾಯಕನಾಗಿ ಸ್ಪಿನ್ನರ್ ಆಲ್ರೌಂಡರ್ ಆಗಿರುವ ಅಕ್ಷರ ಪಟೇಲ್ ಆಡಲಿದ್ದಾರೆ.
ಕಳೆದ ಬಾರಿಯ 2023 ರ ವರ್ಡ್ ಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಮಿ ತಂಡಕ್ಕೆ ಮರಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆ ಆಯ್ಕೆಯಾಗಿರುವ ಶಮಿಗೆ ಟಿ20 ಪಂದ್ಯಗಳು ನಿರ್ಣಾಯಕ ಪಾತ್ರ ವಹಿಸಲಿದೆ.
ಸಂಜು ಸ್ಯಾಮ್ಸನ್ ಉತ್ತಮ ಆಟವಾಡುತ್ತಿದ್ದ ಕಳೆದ ವರ್ಷ 3 ಶತಕಗಳನ್ನು ಸಿಡಿಸಿದರು. ವಿಕೆಟ್ ಕೀಪಿಂಗ್ ಸಹ ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಭಿಷೇಕ್ ಶರ್ಮಾ ಹಾಗೂ ಸಂಜು ಓಪನ್ ಮಾಡಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ತಿಲಕ್ ಬ್ಯಾಟ್ ಬೀಸಲಿದ್ದಾರೆ. 4 ನೆಯ ಕ್ರಮಾಂಕದಲ್ಲಿ ಸೂರ್ಯ ಐದನೆಯ ಹಾರ್ದಿಕ , ಹಾಗೂ 6 ನೆಯ ಕ್ರಮಾಂಕದಲ್ಲಿ ರಿಂಕು ಕಣಕ್ಕಿಳಿಯಲಿದ್ದಾರೆ.
ಲೋಯರ್ ಆರ್ಡರ್ ನಲ್ಲಿ ಅಕ್ಷರ ಪಟೇಲ್, ಮೊಹಮದ್ ಶಮಿ, ಆರ್ಷದೀಪ್ ಸಿಂಗ್ ಆಡಲಿದ್ದಾರೆ. ಪಿಚ್ ಆಧಾರದ ಮೇಲೆ ಹರ್ಷಿತ ರಾಣಾ, ಹಾಗೂ ರವಿ ಆಡಲಿದ್ದಾರೆ. 11 ರ ಬಳಗದಲ್ಲಿ ಈ ವರುಣ್ ಚಕ್ರವರ್ತಿ ಇರಲಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ , ವಾಷಿಂಗ್ ಟನ್ ಸುಂದರ್, ಜುರೆಲ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಬಹುತೇಕ ಇಲ್ಲ .
ಭಾರತ ತಂಡ ಹೀಗಿರಲಿದೆ;
ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ, ರಿಂಕು ಸಿಂಗ್, ಅಭಿಷೇಕ್ ಶರ್ಮಾ, ವರುಣ್ ಚಕ್ರವರ್ತಿ, ಅಕ್ಷರ ಪಟೇಲ್, ಮೊಹಮದ್ ಶಮಿ, ತಿಲಕ್ ವರ್ಮಾ, ಆರ್ಷದೀಪ್ ಸಿಂಗ್, ರವಿ ಅಥವಾ ಹರ್ಷಿತ ರಾಣಾ ಇರಲಿದ್ದಾರೆ.
ಇಂಗ್ಲೆಂಡ್ ತಂಡ ಹೀಗಿರಲಿದೆ :
ಜಾಸ್ ಬಟ್ಲರ್, ಫಿಲ್ ಸಾಲ್ಟ್ , ಬೆನ್ ಡಕೆಟ್, ಲಿವಿಂಗ್ ಸ್ಟನ್, ಹ್ಯಾರಿ ಬ್ರೂಕ್, ಬೆತೆಲ್, ಜೋಪ್ರ ಅರ್ಚರ್, ಮಾರ್ಕ್ ವುಡ್, ಆದಿಲ್ ರಶೀದ್, ಓವರ್ ಟನ್, ಗಸ್ ಆಟಕಿನನ್ಸ್ ಇರಲಿದ್ದಾರೆ.