ಶಿರಸಿ: ತರಕಾರಿ ತುಂಬಿದ್ದ ಲಾರಿ ಪಲ್ಟಿಯಾಗಿ ಹತ್ತು ಜನ ದುರ್ಮರಣ ಹೊಂದಿರುವ ಘಟನೆ ಉತ್ತರ ಕನ್ಮಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಗುಳ್ಳಾಪುರ ಘಾಟ್ ನಲ್ಲಿ ನಡೆದಿದೆ.
ಮೃತರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರು ಮೂಲದವರು ಎಂದು ಹೇಳಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಪಘಾತ ಸಂಭವಿಸಿದೆ. ಬೆಳ್ಳಂಬೆಳಗ್ಗೆ ಸಂಭವಿಸಿದ ಈ ಅಪಘಾತದಲ್ಲಿ ಹತ್ತು ಜನರು ಸ್ಥಳದಲ್ಲಿಯೇ ಮೃತಪಟ್ಟಿರುವುದು ದುರಾದೃಷ್ಟವೇ ಸರಿ.
ಮೃತರನ್ನು ಫಯಾಜ್ ಜಮಖಂಡಿ, ಸಾಧಿಕ್ ಪಾಷಾ(36), ಹುಸೇನ್ (40), ಇಜಾಜ್ ಮುಲ್ಲಾ(20), ಇಮ್ತಿಯಾಜ್ ಮಳಕೇರಿ, ಅಸ್ಲಾಂ ಬಬುಲಿ, ಜಿಲಾನ್ ಅಬ್ದುಲ್ಲಾ ಹಾಗೂ ಇತರ ಇಬ್ಬರು ಎಂದು ಗುರಿತಿಸಲಾಗಿದೆ. ಇವರೆಲ್ಲರೂ ಸವಣೂರು ಮೂಲದವರಾಗಿದ್ದು, ತರಕಾರಿ ವ್ಯಾಪಾರಕ್ಕೆ ತೆರಳಿದ್ದರು.
ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಎಸ್.ಪಿ. ನಾರಾಯಣ್ ಭೇಟಿ ನೀಡಿದ್ದು, ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಮೃತದೇಹಗಳನ್ನು ಹಾವೇರಿಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.