ಮುಂಬೈ: ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 20 ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದಿದೆ.
ಪುಷ್ಪಕ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣಕ್ಕೆ ಪ್ರಯಾಣಿಕರು ರೈಲಿನಿಂದ ಇಳಿದು ನಿಂತಿದ್ದರು. ಈ ವೇಳೆ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಆಗಮಿಸಿದ್ದು, ಹಳಿಯ ಮೇಲೆ ನಿಂತಿದ್ದ 20 ಪ್ರಯಾಣಿಕರು ರೈಲಿನಡಿ ಸಿಲುಕಿದ್ದರು.
ಮೊದಲಿಗೆ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಪ್ರಯಾಣಿಕರೆಲ್ಲ ಬೋಗಿಯಿಂದ ಹಾರಿ ಪರಾರಿಯಾಗಲು ಪ್ರಯತ್ನಿಸಿದ್ದರು. ಎಲ್ಲ ಬೋಗಿಯಲ್ಲಿನ ಜನರು ಗಾಬರಿಗೊಂಡು ಕೆಳಗಿಳಿದಿದ್ದರು. ಈ ವೇಳೆ ಮತ್ತೊಂದು ಬಂದ ಕಾರಣದಿಂದ 20 ಜನರು ಮೃತಪಟ್ಟಿದ್ದಾರೆ.
30 ರಿಂದ 40 ಜನರು ಗಾಯಗೊಂಡಿರುವ ಮಾಹಿತಿಯಿದ್ದು, ಘಟನೆಯ ಕುರಿತು ಇನ್ನಷ್ಟೂ ಮಾಹಿತಿಗಳು ಹೊರಬೇಕಿದೆ. ಸಧ್ಯಕ್ಕೆ ರೈಲ್ವೇ ಪೊಲೀಸರು, ಘಟನೆಯ ವಿವರ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆದಿದೆ.
ಜಲಗಾಂವ್ನ ಪರಾಂಡ ರೈಲು ನಿಲ್ದಾಣದಲ್ಲಿ ಯಾರೋ ಇದ್ದಕ್ಕಿದ್ದಂತೆ ಚೈನ್ ಎಳೆದರು. ಈ ವೇಳೆ ರೈಲು ಏಕಾಏಕಿ ನಿಂತಿತು. ನಿಂತ ತಕ್ಷಣ ಒಂದು ಭೋಗಿಯಲ್ಲಿದ್ದ ಪ್ರಯಾಣೀಕರು ಬೆಂಕಿ ಎಂದು ಕೂಗಿಕೊಂಡರು ಎನ್ನಲಾಗಿದೆ. ಈ ವೇಳೆ ಗಾಬರಿಯಿಂದ ಎಲ್ಲ ಭೋಗಿಯ ಪ್ರಯಾಣಿಕರು ಇಳಿದು ಓಡಲು ಶುರು ಮಾಡಿದರು. ಈ ವೇಳೆ ಮತ್ತೊಂದು ಹಳಿಯಲ್ಲಿ ಬಂದ ರೈಲು ಹರಿದು ದುರ್ಘಟನೆ ಸಂಭವಿಸಿದೆ ಎಂದು ರೈಲ್ವೇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Updating…