ಉಪಯುಕ್ತ ಸುದ್ದಿ

32,438 ಗ್ರೂಪ್ ‘ಡಿ’ ಹುದ್ದೆಗೆ ಅರ್ಜಿ ಆಹ್ವಾನ

Share It

ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ ಡಿ ಹುದ್ದೆಗೆ ಅರ್ಜಿಯನ್ನು ಕರೆದಿದೆ. ನಾಳೆಯಿಂದ ಜ. 23 ರಿಂದ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗೆ ಬೇಕಾದ ಅರ್ಹತೆಗಳು ಹಾಗೂ ಆಯ್ಕೆಯ ಪ್ರಕ್ರಿಯೆ ಹೇಗೆ ಎಂಬುದನ್ನು ನೋಡೋಣ ಬನ್ನಿ.

ಭಾರತೀಯ ರೈಲ್ವೆ ಯು ಸೆಂಟ್ರಲ್ ಸಾರಿಗೆ ಸಂಸ್ಥೆಯಾಗಿರುವುದರಿಂದ ಆಯ್ಕೆಯ ಅಭ್ಯರ್ಥಿಗಳನ್ನು ದೇಶದ ಯಾವುದೇ ಪ್ರದೇಶಗಳಲ್ಲಿ ಬೇಕಾದರೂ ಕೆಲಸಕ್ಕೆ ನೇಮಕ ಮಾಡಬಹುದಾಗಿದೆ. ಉತ್ತಮ ಮಟ್ಟದ ಸಂಬಳವನ್ನು ಪಡೆಯಬುದಾಗಿದೆ. 

ಭಾರತೀಯ ರೈಲ್ವೆ ತನ್ನ ಗ್ರೂಪ್ ಡಿ ಹುದ್ದೆಗೆ 32,438 ಹುದ್ದೆಗಳ ನೇಮಕಾತಿಯಲ್ಲಿ ನಡೆಸಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 18,000 ಸಂಬಳವನ್ನು ನೀಡಲಿದ್ದಾರೆ.

ಅರ್ಹತೆಗಳು ಮತ್ತು ಅರ್ಜಿ ಶುಲ್ಕ : ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ಯಾವುದೇ ಡಿಪ್ಲೊಮೊ ಐಟಿಐ ಪೂರ್ಣಗೊಳಿಸಿದ್ದಾರೆ ಸಾಕು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಆರ್ಜಿ ಶುಲ್ಕವನ್ನು ವರ್ಗಗಳ ಆಧಾರದಲ್ಲಿ ಕಟ್ಟಬೇಕು. ಇಡಬ್ಲುಎಸ್, ಒಬಿಸಿ ಹಾಗೂ ಜನರಲ್ ಅಭ್ಯರ್ಥಿಗಳು 500 ರೂ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿ ಹಾಗೂ ವಿಕಲ ಚೇತನ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕ ಇರಲಿದೆ.

ವಯೋಮಿತಿ : 18 ವರ್ಷದಿಂದ 33 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ 5 ವರ್ಷ, ವಿಶೇಷ ಚೇತನರಿಗೆ 10 ವರ್ಷ , ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡೀಲಿಕೆಯನ್ನು ನೀಡಲಾಗಿದೆ. 

ಆಯ್ಕೆ ಪ್ರಕ್ರಿಯೆ :
ಕಂಪ್ಯೂಟರ್ ಟೆಸ್ಟ್ 

ದೈಹಿಕ ಪರೀಕ್ಷೆ

ಪುರುಷ 35 ಕೆಜಿ ತೂಕ ಎತ್ತುವುದು, 4 ನಿಮಿಷದಲ್ಲಿ 1000 ಮೀ ಓಡ್ಬೇಕು.

ಮಹಿಳಾ ಅಭ್ಯರ್ಥಿಗಳು 20 ಕೆಜಿ ತೂಕ ಮತ್ತು 5 ನಿಮಿಷದಲ್ಲಿ 1000 ಮೀ ಓಡ್ಬೇಕು.

ದಾಖಲೆಗಳ ಪರಿಶೀಲನೆ 

ವೈದ್ಯಕೀಯ ಪರೀಕ್ಷೆ 


Share It

You cannot copy content of this page