ಫ್ಯಾಷನ್ ಸಿನಿಮಾ ಸುದ್ದಿ

ಏನಾಗಿದೆ ಖ್ಯಾತ ಬಾಲಿವುಡ್ ನಿರ್ದೇಶಕನಿಗೆ? ಇದು ನಿಜಕ್ಕೂ ಕರಣ್ ಜೋಹರ್ ತಾನೇ?

Share It

ತೆಳ್ಳಗಾದ ಕರಣ್ ಜೋಹರ್ : ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ

ಬೆಂಗಳೂರು: ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಕರಣ್ ಜೋಹರ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಕರಣ್ ಜೋಹರ್ ಅವರ ದೈಹಿಕ ಸ್ಥಿತಿಗತಿಯು ಇಂತಹದ್ದೊAದು ಪ್ರಶ್ನೆಯನ್ನು ಜಾಲತಾಣದಲ್ಲಿ ಹುಟ್ಟುಹಾಕಿದೆ ಎನ್ನಬಹುದು. ಏಕೆಂದರೆ, ವಿಡಿಯೋವೊಂದರಲ್ಲಿ ಕರಣ್ ಜೋಹರ್ ಬಹಳ ತೆಳ್ಳಗಾಗಿರುವುದು ಕಂಡುಬAದಿದ್ದು, ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಕರಣ್ ಜೋಹರ್ ಯಾವುದಾದರೂ ಸಿನಿಮಾಗಾಗಿ ಇಷ್ಟೊಂದು ಸಪೂರವಾಗುತ್ತಿದ್ದಾರಾ? ಎಂದು ಕೆಲವರು ಪ್ರಶ್ನೆ ಮಾಡಿದ್ದರೆ, ಅವರ ದೈಹಿಕ ಸ್ಥಿತಿ ನೋಡಿದರೆ ಆರೋಗ್ಯದ ಸಮಸ್ಯೆಯಿರಬಹುದು ಎಂದು ಕೆಲವರು ಆತಂಕ ವ್ಯಕ್ಯಪಡಿಸಿದ್ದಾರೆ. ಇದು ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಡಿಯೋದಲ್ಲಿ ಕರಣ್ ಜೋಹರ್, ಹೋಟೆಲ್‌ವೊಂದರಿAದ ಹೊರಗೆ ಬರುತ್ತಿದ್ದು, ಈ ವೇಳೆ ಸೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ತನ್ನ ಹಿಂದಿನ ದೇಹ ಸೌಂದರ್ಯ ಅಲ್ಲಿ ಮಾಯವಾಗಿದೆ. ಬಹಳ ತೆಳ್ಳದಾಗಿ ಕಾಣಿಸುತ್ತಿದ್ದಾರೆ. ಹೀಗಾಗಿ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಅಭಿಮಾನಿಗಳಲ್ಲಿ ಆತಂಕವನ್ನು ತರಿಸಿದೆ ಎನ್ನಬಹುದು.


Share It

You cannot copy content of this page