ಮುಂಬೈ: ಭಾರತೀಯ ಸ್ಟಾರ್ ಆಟಗಾರರು ಪದೇ ಪದೇ ಮುಗ್ಗರಿಸುತ್ತಿರುವು ಮುನ್ನೆಲೆಗೆ ಬರುತ್ತಿದೆ. ತವರಿನಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ವೈಟ್ ವಾಷ್ ಆದ ಬಳಿಕ ತಂಡವು ಸಂಪೂರ್ಣವಾಗಿ ಕಳಪೆ ಪ್ರದರ್ಶನ ನೀಡಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸಹ ಅಂದುಕೊಂಡರೆ ನಡೆಯಲಿಲ್ಲ. ಇದನ್ನು ಗಮನಿಸಿದ ಬಿಸಿಸಿಐ ದೇಶಿ ಕ್ರಿಕೆಟ್ ಆಡುವುದನ್ನು ಕಡ್ಡಾಯ ಮಾಡಿತು. ಬಳಿಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಶೇಯಸ್ ಐಯ್ಯರ್, ರಿಷಬ್ ಪಂತ್, ಶುಭ್ಮನ್ ಗಿಲ್ ದೇಶೀಯ ಆಟದಲ್ಲಿ ಮತ್ತೆ ಎಡವಿದ್ದಾರೆ.
ಹೌದು ರಣಜಿ ಪಂದ್ಯದಲ್ಲಿ ಮತ್ತೆ ರನ್ ಗಳಿಸಿದೆ ಸಿಂಗಲ್ ಡಿಜಿಟ್ ಗೆ ವಿಕೇಟ್ ಒಪ್ಪಿಸಿದ್ದಾರೆ. ರೋಹಿತ್ ಶರ್ಮಾ ಮುಂಬೈ ಪರ ಆಡುತ್ತಿದ್ದು ಜಮ್ಮು ಕಾಶ್ಮೀರ ದ ವಿರುದ್ಧ 19 ಎಸೆತಗಳನ್ನು ಎದುರಿಸಿದ ಕೇವಲ 3 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ. ಇನ್ನು ಭಾರತದ ಓಪನರ್ ಆದ ಯಶಸ್ವಿ ಕೂಡ ಮುಂಬೈ ತಂಡಕ್ಕೆ ಆಡುತ್ತಿದ್ದು ಕೇವಲ 4 ರನ್ ಗಳಿಸಿ ಔಟ್ ಆಗಿದ್ದಾರೆ.
ಬಹು ದಿನಗಳ ನಂತರ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದಿರುವ ಐಯ್ಯರ್ ಕೂಡ ಕೇವಲ 13 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಮತ್ತೆ ಎಡವಿದ್ದಾರೆ. ಸೌರಾಷ್ಟ್ರ ಪರ ಆಡುತ್ತಿರುವ ಇವರು 1 ರನ್ ಗಳಿಸಿ ಔಟ್ ಆಗಿದ್ದಾರೆ. ಪಂತ್ ಡೆಲ್ಲಿ ಯ ಪರ ಆಡುತ್ತಿದ್ದು ಸಿಂಗಲ್ ನಂಬರ್ ಗೆ ವಿಕೆಟ್ ಕೈ ಚೆಲ್ಲಿದ್ದಾರೆ.
ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ಹಾಗೂ ಕರ್ನಾಟಕ ಪಂದ್ಯದಲ್ಲಿ ಚಾಂಪಿಯನ್ಸ್ ಟ್ರೋಫಿಯ ಉಪನಾಯಕನಾಗಿರುವ ಶುಭ್ಮನ್ ಗಿಲ್ ಕೇವಲ 4 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಸದ್ಯ ಇವರೆಲ್ಲರೂ 2025 ರ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದು, ಆರಂಭಕ್ಕೂ ಮುನ್ನ ಮತ್ತೆ ಲಯಕ್ಕೆ ಮರಳಲಿ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾಾರೆ.