ಬೆಂಗಳೂರು : ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಇಡೀ ಮನೆ ಹೊತ್ತಿ ಉರಿದಿರುವ ಘಟನೆ ರಾಜಧಾನಿಯ ವಿನಾಯಕ ನಗರ ವ್ಯಾಪ್ತಿಯಲ್ಲಿ ನಡೆದಿದೆ.
ವಿನಾಯಕ ನಗರದ ಶಂಕರ್ ಮಾಲೀಕತ್ವದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಮನೆಯೇ ಹೊತ್ತಿ ಉರಿದಿದೆ. ಈ ಮನೆಯನ್ನು ಮಾಲೀಕ ಶಂಕರ್ ಅವರು, ಹುಡುಗರಿಗೆ ಬಾಡಿಗೆ ನೀಡಿದ್ದರು. ಹುಡುಗರು ಮನೆಗೆ ಬೀಗ ಹಾಕಿಕೊಂಡು ಹೊರ ಹೋಗಿದ್ದಾಗ ಘಟನೆ ನಡೆದಿದೆ.
ವಿಲ್ಸನ್ ಗಾರ್ಡ್ನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬAಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.