ದರ್ಖಾಸ್ತು ಜಮೀನು ಪೋಡಿ ಪರದಾಟ ಪರಿಹಾರ: ಸರಕಾರದಿಂದ ರೈತರ ಮನೆ ಬಾಗಿಲಿಗೆ ಪೋಡಿ ದಾಖಲೆ
ಬೆಂಗಳೂರು: ದರ್ಖಾಸ್ತು ಜಮೀನುಗಳನ್ನು ಪೋಡಿ ಮಾಡಿಸಲು ಪರದಾಡುತ್ತಿದ್ದ ರೈತರಿಗೆ ಇದೀಗ ಸರಕಾರ ಗುಡ್ ನ್ಯೂಸ್ ನೀಡಿದ್ದು, ಮನೆ ಬಾಗಿಲಿಗೆ ಪೋಡಿ ಅಭಿಯಾನ ಆರಂಭಿಸಿದೆ.
ಈಗಾಗಲೇ, ರಾಜ್ಯದಲ್ಲಿ ಡಿಸೆಂಬರ್ ಮೊದಲ ವಾರದಿಂದ ಪೋಡಿ ಅಭಿಯಾನ ಆರಂಭವಾಗಿದ್ದು,
27,409 ಜಮೀನುಗಳ ಒನ್ ಟು ಫೈವ್ ಸರ್ವೆ ಆಗಿದೆ. ಅದರಲ್ಲಿ ಈವರೆಗೆ 26 ಜಮೀನುಗಳ ಸರ್ವೆ ಕಾರ್ಯ ಪೂರ್ಣಗೊಳಿಸಿ 5,000 ಜನರಿಗೆ ದಾಖಲೆಗಳನ್ನು ಒದಗಿಸಿಕೊಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈವರೆಗೆ 21 ಸಾವಿರ ಜನರಿಗೆ ಹೊಸ ಸರ್ವೆ ನಂಬರ್, ಆರ್ ಟಿಸಿ ಕೊಡಲಾಗಿದೆ. ಇನ್ನುಳಿದ ರೈತರಿಗೆ ಸರ್ವೆ ಮಾಡಿಸಿ, ಹೊಸ ಖಾತೆ ಸಂಖ್ಯೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಟಾಸ್ಕ್ ನೀಡಲಾಗಿದ್ದು, ಅವರು ಆಂಧೋಲನದ ಮಾದರಿಯಲ್ಲಿ ಪೋಡಿ ಅಭಿಯಾಂತ್ರಿಕ ಕೈಗೆತ್ತಿಕೊಂಡಿದ್ದಾರೆ.


