ಮೆಟ್ರೋ ಪ್ರಾಯಾಣಿಕರಿಗೆ ಗುಡ್ ನ್ಯೂಸ್ : ಪ್ರಯಾಣ ದರ ಏರಿಕೆ ಸಧ್ಯಕ್ಕಿಲ್ಲ !
ಬೆಂಗಳೂರು: ದಿನನಿತ್ಯ ಮೆಟ್ರೋದಲ್ಲಿ ಪ್ರಯಾಣ ಮಾಡುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವ BMRCL ನಿರ್ಧಾರಕ್ಕೆ ಹಿನ್ನಡೆಯಾಗಿದೆ.
ಈಗಾಗಲೇ KSRTC, BBMTC ಬಸ್ ದರ ಏರಿಕೆ ಮಾಡಿದ ಕಾರಣಕ್ಕೆ BMRCL ಮೆಟ್ರೋ ಪ್ರಯಾಣದರ ಏರಿಕೆ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರದ ಮುಂದಿಟ್ಟಿತ್ತು. ಈ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಧ್ಯಕ್ಕೆ ಮೆಟ್ರೋ ಪ್ರಯಾಣ ದರ ಏರಿಕೆಯಿಲ್ಲ ಎಂಬುದು ಖಚಿತವಾಗಿದೆ.
BMTC, KSRTC ಟಿಕೆಟ್ ದರ ಈಗಾಗಲೇ ಹೆಚ್ಚಾಗಿದೆ. ಮೆಟ್ರೋ ದರವೂ ಹೆಚ್ಚಾಗಿದ್ದರೆ ಸಾರ್ವಜನಿಕರಿಗೆ ಬಹಳ ಹೊರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ನಿರ್ಧಾರಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.


