ವಿಮಾನ ವಿಳಂಭ: ಕುಂಭಮೇಳದಿಂದ ಬರುತ್ತಿದ್ದ ಕನ್ನಡಿಗರು ಪರದಾಟ
ಬೆಂಗಳೂರು: ಕುಂಭಮೇಳ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಕರ್ನಾಟಕದ ಪ್ರಯಾಣಿಕರು ವಿಮಾನ ವಿಳಂಭದ ಸಮಸ್ಯೆಯಿಂದ ಪರದಾಟ ನಡೆಸಿದ ಘಟನೆ ಪ್ರಯಾಗ್ ರಾಜ್‌ನಲ್ಲಿ ನಡೆದಿದೆ.
ಪ್ರಯಾಗ್ ರಾಜ್‌ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ Spicejet ವಿಮಾನ ವಿಳಂಬವಾಗಿದೆ. ಮಧ್ಯಾಹ್ನ 2.10 ಕ್ಕೆ ಹೊರಡಬೇಕಿದ್ದ ವಿಮಾನ ಸಂಜೆಯಾದರೂ ಹೊರಟಿಲ್ಲ ಎಂದು ಹೇಳಲಾಗುತ್ತಿದ್ದು, ಪ್ರಯಾಣಿಕರ ಪರದಾಟ ಇನ್ನೂ ಮುಂದುವರಿದಿದೆ.
ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕರು ಪರದಾಟ ನಡೆಸುತ್ತಿದ್ದು, ಸಿಬ್ಬಂದಿ ಈವರೆಗೆ ಸರಿಯಾದ ಸಮಯದ ಮಾಹಿತಿ ಕೊಡುತ್ತಿಲ್ಲ. ಇದೀಗ ರಾತ್ರಿ 11 ಗಂಟೆಗೆ ಹೊರಡುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಎಂದು ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.


