ಶತಕ ಭಾರಿಸಿದ ಇಸ್ರೋ: 46 ವರ್ಷದಲ್ಲಿ ನೂರು ಸಾಧನೆ

Share It

ಬೆಂಗಳೂರು: 46 ವರ್ಷದಲ್ಲಿ ನೂರು ಗಗನಯಾತ್ರೆ ಕೈಗೊಂಡಿರುವ ಇಸ್ರೋ ಇಂದು ತನ್ನ ನೂರನೇ ಯಾನವನ್ನು ಆರಂಭಿಸಿದೆ.

ಇಸ್ರೋದ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಲ್ಲಿ ಇಂದು ಬೆಳಗ್ಗೆ 6.23ಕ್ಕೆ GSLV F-15 ಹೆಸರಿನವಾಹನಗಳ ಸಂಚಾರಕ್ಕೆ ಅಗತ್ಯವಿರುವ ಮಾಹಿತಿ ಒದಗಿಸುವ ಉದ್ದೇಶದ ನ್ಯಾವಿಗೇಷನ್ ಉಪಗ್ರಹ ಉಡ್ಡಯನ ಮಾಡಲಾಗಿದ್ದು, ಇದು ಇಸ್ರೋದ ನೂರನೇ ಉಪಗ್ರಹ ಉಡ್ಡಯನವಾಗಿದೆ.

ಈ ಉಪಗ್ರಹವು ಭೂ ಸಾರಿಗೆ, ವಾಯು ಸಾರಿಗೆ ಮತ್ತು ಕಡಲಯಾನಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಸಹಾಯ ಮಾಡಲಿದೆ. ಕೃಷಿ ಕ್ಷೇತ್ರದ ನಿಖರ ಮಾಹಿತಿಗೆ ಅನುಕೂಲವಾಗಲಿದೆ. ಮೊಬೈಲ್‌ಗಳಲ್ಲಿ ಲೊಕೇಷನ್ ಆಧಾರಿತ ಸೇವೆಗಳು, ಉಪಗ್ರಹಗಳ ಕಕ್ಷೆಗಳ ಮಾಹಿತಿ, ಇಂಟರ್ನೆಟ್ ಆಫ್ ಥಿಂಕ್ಸ್ ಸೇವೆಗಳಲ್ಲಿ ಈ ಉಪಗ್ರಹವು ಸಹಾಯಕವಾಗಲಿದೆ.

ಈವರೆಗೆ ಇಸ್ರೋ ಚಂದ್ರಯಾನ, ಮಂಗಳಗ್ರಹದ ಮೇಲಿನ ಯಾನವೂ ಸೇರಿದಂತೆ ನೂರು ಗುರುತರ ಉಡ್ಡಯನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇನ್ನು ಮುಂದಿನ ನೂರು ವರ್ಷಗಳಲ್ಲಿ ಈ ಹಿಂದಿನ ವೇಗಕ್ಕಿಂತ ನಾಲ್ಕುಪಟ್ಟು ವೇಗದಲ್ಲಿ ಕಾರ್ಯನಿರ್ವಹಿಸುವ ವಿಶ್ವಾಸವನ್ನು ಇಸ್ರೋ ಹೊಂದಿದೆ.


Share It

You May Have Missed

You cannot copy content of this page