ಬೆಂಗಳೂರು: ಮಧುಗಿರಿ KSRTC ಬಸ್ ಡಿಪೋದಲ್ಲಿ ಆಕಸ್ಮಿಕವಾಗಿ ಬಸ್ ಗೆ ಬೆಂಕಿ ತಗುಲಿರುವ ಘಟನೆ ನಡೆದಿದೆ.
ಡಿಪೋದಲ್ಲಿ ನಿಲ್ಲಿಸಿದ್ದ ಬಸ್ ಗೆ ಏಕಾಏಕಿ ಬೆಂಕಿ ತಗುಲಿದ್ದು, ಬೆಂಕಿ ಇಡೀ ಬಸ್ ಗೆ ಆವರಿಸಿದೆ. ಈ ವೇಳೆ ಪಕ್ಕದಲ್ಲಿ ನಿಲ್ಲಿಸಿದ್ದ ಬಸ್ ಗಳಿಗೆ ಬೆಂಕಿ ತಗಲದಂತೆ ಸಿಬ್ಬಂದಿ ಮುಂಜಾಗ್ರತೆ ಅನುಸರಿಸಿದ್ದು, ಇದರಿಂದ ಭಾರಿ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ.
ಸಿಬ್ಬಂದಿ ವಾಹನ ತೊಳೆಯುವ ನೀರಿನ ಪೈಪ್ ಬಳಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಂತ್ರಿಕ ಕಾರಣದಿಂದ ಬೆಂಕಿ ತಗುಲಿದೆ ಎಂದು ತಾಂತ್ರಿಕ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ. ಬೆಂಕಿಯಿಂದಾಗಿ ಒಂದು ಬಸ್ ನ ಮುಂಭಾಗ ಸಂಪೂರ್ಣ ಸುಟ್ಟು ಭಸ್ಮವಾಗಿದೆ.