ರಾಜಕೀಯ ಸುದ್ದಿ

ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟ ಕಸಿದುಕೊಂಡ ಮಹಾರಾಷ್ಟ್ರ ಬಿಜೆಪಿ ಸರಕಾರ!

Share It

ಮುಂಬೈ: ಆಹಾರದ ಅಂತರ್ಯುದ್ಧ ಮುಂದುವರಿಸಿರುವ ಬಿಜೆಪಿ ಇದೀಗ ಮಹಾರಾಷ್ಟ್ರ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಮೊಟ್ಟೆಯನ್ನು ಕಿತ್ತುಕೊಳ್ಳುವ ಮೂಲಕ ತನ್ನ ಚಿಂತನೆಯನ್ನು ಮುಂದುವರಿಸಿದೆ.

ಈಗಾಗಲೇ ಮಧ್ಯಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟಯನ್ನು ತೆಗೆದುಹಾಕುವ ಮೂಲಕ ವಿವಾದಕ್ಕೆ ಕಾರಣವಾಗಿತ್ತು. ಇದೇ ಚಾಳಿಯನ್ನು ಮಹಾರಾಷ್ಟ್ರದಲ್ಲಿಯೂ ಮುಂದುವರಿಸಿದ್ದು, ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲೆಲ್ಲ ಮಾಂಸಹಾರ ವಿರೋಧಿ ನೀತಿಯನ್ನು ಮುಂದುವರಿಸುತ್ತಿದೆ.

ಸರಕಾರ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿ 1 ರಿಂದ 8 ನೇ ತರಗತಿವರೆಗೆ ನೀಡುವ ಬಿಸಿಯೂಟದಲ್ಲಿ ನೀಡುವ ಖಾದ್ಯಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಿತ್ತು. ಇದರಲ್ಲಿ ಮೊಟ್ಟೆಯನ್ನು ಪಟ್ಟಿಯಿಂದ ತೆಗೆದುಹಾಕಿದೆ. ಐಚ್ಛಕವಾಗಿ ಮೊಟ್ಟೆ ಪಲಾವ್ ಅಥವಾ ನಾಚ್ನಿ ಸಟ್ಟು ನೀಡಬಹುದು. ಆದರೆ, ಇದಕ್ಕೆ ಸರಕಾರ ಅನುದಾನ ನೀಡುವುದಿಲ್ಲ.

ಈ ರೀತಿ ಮೊಟ್ಟೆ ಪಲಾವ್ ಕೊಡುವುದಿದ್ದರೆ, ಅದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ದಾನಿಗಳಿಂದ ಅನುದಾನ ಪಡೆದು ನೀಡಬಹುದು. ಇದಕ್ಕೆ ಸರಕಾರದಿಂದ ಯಾವುದೇ ಅನುದಾನ ನೀಡುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಮಹಾರಾಷ್ಟç ಸರಕಾರದ ನೀತಿಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಶಿವಸೇನೆ, ಕಾಂಗ್ರೆಸ್ ಬಿಜೆಪಿಯ ಆಹಾರ ನೀತಿಯನ್ನು ಟೀಕಿಸಿವೆ. ಕೇಂದ್ರ ಬಿಸಿಯೂಟ ನೀಡುವ ಪಟ್ಟಿಯಲ್ಲಿ ಮೊಟ್ಟೆ ನೀಡುವುದನ್ನು ಕಡ್ಡಾಯ ಮಾಡಿಲ್ಲ. ಹೀಗಾಗಿ, ರಾಜ್ಯ ಸರಕಾರ ಕೂಡ ಅದನ್ನು ಅನುಸರಿಸಿದೆ ಎಂದು ಅಧಿಕಾರಿಗಳು ಸಮರ್ಥನೆ ಮಾಡಿಕೊಂಡಿದ್ದಾರೆ.

ಕೇಂದ್ರ ಸರಕಾರ ಮಧ್ಯಾಹ್ನದ ಬಿಸಿಯೂಟಕ್ಕೆ ಶೇ.60 ರಷ್ಟು ಅನುದಾನ ನೀಡುತ್ತದೆ. ಇದರಲ್ಲಿ ಮೊಟ್ಟೆ ನೀಡುವ ಕುರಿತು ಯಾವುದೇ ಉಲ್ಲೇಖವಿಲ್ಲ. ಆದರೆ, ರಾಜ್ಯ ಸರಕಾರಗಳು ತಮ್ಮದೇ ಸಂಪನ್ಮೂಲಗಳನ್ನು ಬಳಸಿ ಪೌಷ್ಠಿಕ ಆಹಾರವಾದ ಮೊಟ್ಟೆ ವಿತರಣೆಯನ್ನು ಮಾಡುತ್ತಾ ಬರುತ್ತಿವೆ.

ಕರ್ನಾಟಕದಲ್ಲಿ ಬಿಸಿಯೂಟ ಯೋಜನೆ ಜಾರಿಗೆ ಬಂದಾಗಿನಿAದ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಮೊಟ್ಟೆ ವಿತರಣೆ ಸ್ಥಗಿತಗೊಳಿಸುವ ಪ್ರಯತ್ನ ನಡೆದಿತ್ತು. ವಿವಾದ ಹೆಚ್ಚಾದ ಕಾರಣಕ್ಕೆ ಮೊಟ್ಟೆ ನೀಡುವ ಕ್ರಮವನ್ನು ಪುನರ್ ಆರಂಭ ಮಾಡಲಾಗಿತ್ತು. ಅಂಗನವಾಡಿಯ ಮೊಟ್ಟೆ ವಿತರಣೆಯಲ್ಲಿಯೇ ಅಕ್ರಮ ನಡೆದಿರುವ ಆರೋಪವೂ ಕೇಳಿಬಂದಿತ್ತು.

ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರ, ಗೋವಾ ಮತ್ತು ಮಧ್ಯಪ್ರದೇಶದಲ್ಲಿ ಮೊಟ್ಟೆ ನೀಡುವ ಉಪಕ್ರಮವನ್ನು ಸ್ಥಗಿತಗೊಳಿಸಿದಂತಾಗಿದೆ. ಮಹಾರಾಷ್ಟ್ರದಲ್ಲಿ ಮೊಟ್ಟೆಯಿಂದ ತಯಾರಿಸಿದ ಪಲಾವ್ ನೀಡಬಹುದು ಎಂದು ಅನುಮತಿ ನೀಡಿದ್ದರೂ, ಅನುದಾನ ಮಾತ್ರ ನಾವು ಕೊಡುವುದಿಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


Share It

You cannot copy content of this page