ನವದೆಹಲಿ: ಮುಚ್ಚುವ ಹಂತಕ್ಕೆ ಬಂದಿದ್ದ ಅಂಚೆಕಚೇರಿಯ ಪುನಶ್ಚೇತನಕ್ಕೆ ಮುಂದಾಗಿರುವ ಕೇಂದ್ರ ಸರಕಾರ, ಅಂಚೆ ಕಚೇರಿಗಳಿಗೆ ಹೊಸ ರೂಪ ನೀಡಲು ತೀರ್ಮಾನಿಸಿದೆ.
ಮೊದಲ ಹಂತವಾಗಿ ಗ್ರಾಮೀಣ ಪ್ರದೇಶದಲ್ಲಿ ೧.೫ ಲಕ್ಷ ಅಂಚೆ ಕಚೇರಿಗಳನ್ನು ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ತೀರ್ಮಾನಿಸಿದೆ. ಈ ಅಂಚೆ ಕಚೇರಿಗಳ ಸ್ಥಾಪನೆಯೊಂದಿಗೆ ಭಾರತೀಯ ಅಂಚೆಯನ್ನು ದೇಶದ ಅತಿ ದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾಗಿ ರೂಪಾಂತರಗೊಳಿಸುವ ಯೋಜನೆ ಹೊಂದಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದರು.
ದೇಶದ ಅತಿ ದೊಡ್ಡ ಅಂಚೆ ಸೇವೆಯಾಗಿರುವ ಭಾರತೀಯ ಅಂಚೆಯನ್ನು ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಮಾಡಲು ೧.೫ ಲಕ್ಷ ಗ್ರಾಮಾಂತರ ಅಂಚೆ ಕಚೇರಿ ಸ್ಥಾಪಿಸುವ ಮೂಲಕ ದೊಡ್ಡ ಲಾಜಿಸ್ಟಿಕ್ ಸೇವಾ ಸಂಸ್ಥೆಯಾಗಿ ರೂಪಿಸಲಾಗುವುದು ಎಂದರು.
ಅAಚೆ ಕಚೇರಿಗಳಲ್ಲಿ ಬ್ಯಾಂಕಿAಗ್ ವ್ಯವಸ್ಥೆಯನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಣೆ ಮಾಡುವುದು, ಗ್ರಾಮೀಣ ಭಾಗದಲ್ಲಿ ಅಂಚೆ ಎಟಿಎಂಗಳನ್ನು ತೆರೆಯುವುದು ಸೇರಿದಂತೆ ಅನೇಕ ಉನ್ನತೀಕರಣದ ಯೋಜನೆಗಳನ್ನು ರೂಪಿಸಲು ಬಜೆಟ್‌ನಲ್ಲಿ ತೀರ್ಮಾನಿಸಲಾಗಿದೆ.