ಅತ್ಯಾಚಾರ ಎಸಗಿದ ಪಾಪಿ, ಇಡೀ ದೇಹಕ್ಕೆ ಕೊಟ್ಟಿದ್ದು ಸುತ್ತಿಗೆಯ ಪೆಟ್ಟು
ಕೊಚ್ಚಿ: 19 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿ, ನಂತರ ಆಕೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಚೊಟ್ಟನಿಕ್ಕಾರದಲ್ಲಿ ನಡೆದಿದೆ.
ಕಳೆದ ಭಾನುವಾರ 19 ಮಹಿಳೆಯೊಬ್ಬರು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಅಂದಿನಿAದ ವೆಂಟಿಲೇಟರ್ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅತ್ಯಾಚ್ಯಾರ ಮತ್ತು ಕೊಲೆ ಯತ್ನದ ಆರೋಪದಲ್ಲಿ ಪೊಲೀಸರು ಅನೂಪ್ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದ್ದರು.
ಮಹಿಳೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಎಫ್‌ಐಆರ್‌ನಲ್ಲಿ ಬದಲಾವಣೆ ಮಾಡಿ, ಕೊಲೆ ಆರೋಪ ಹೊರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆತನನ್ನು ಸ್ಥಳ ಮಹಜರಿಗಾಗಿ ಆಕೆಯ ಮನೆಗೆ ಕರೆದೊಯ್ದಿದ್ದು, ಆತ ಸಂತ್ರಸ್ತೆಗೆ ಪರಿಚಯಸ್ಥನೇ ಆಗಿದ್ದು, ಅತ್ಯಾಚಾರ ನಡೆಸಿದ ನಂತರ ಆಕೆ ಮೇಲೆ ಅಮಾನುಷವಾಗಿ ಸುತ್ತಿಗೆಯಿಂದ ಹಲ್ಲೆ ನಡೆದಿದೆ.
ಬಂಧಿತ ಆರೋಪಿ ಈ ಹಿಂದೆಯೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಜತೆಗೆ ಎರಡು ಕ್ರಿಮಿನಲ್ ಪ್ರಕರಣ ಹಾಗೂ ಮಾಧಕ ವಸ್ತುಗಳ ಸಾಗಾಟ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


