ಹೊಸದಿಲ್ಲಿ: ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆಗೆ ಮೊದಲೇ ನೀಡಲು 40 ಲಕ್ಷ ರು. ಆಫರ್ ಮಾಡಿದ ಆರೋಪ ಕೇಳಿಬಂದಿದೆ.
ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ದೀಪಕ್ ಗಯಾರಾಮ್ ಗೂಧಾನೆ, ಸುಮಿತ್ ಕೈಲಾಸ್ ಜಾಧವ್ ಮತ್ತು ಯೋಗೇಶ್ ಸುರೇಂದ್ರ ವಾಘಮಾರೆ ಎಂದು ಗುರುತಿಸಲಾಗಿದೆ.
ಈ ಮೂವರು ಆರೋಪಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಆರೋಪಿಗಳಿಗೆ ಕರೆ ಮಾಡಿ ಪ್ರಶ್ನೆ ಪತ್ರಿಕೆ ಒದಗಿಸುವ ಆಫರ್ ನೀಡುತ್ತಿದ್ದರು. ಅದಕ್ಕೆ ಪ್ರತಿಯಾಗಿ 40 ಲಕ್ಷ ರುಪಾಯಿ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬAಧ ಪರೀಕ್ಷಾರ್ಥಿಗಳು ಎಂಪಿಎಸ್‌ಸಿಗೆ ದೂರು ನೀಡಿತ್ತು.
ಎಂಪಿಎಸ್‌ಸಿ ಕಾರ್ಯದರ್ಶಿ ಸುವರ್ಣ ಖಾರತ್ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಚಕನ್ ಪ್ರದೇಶದಲ್ಲಿದ್ದು, ಮತ್ತೊಬ್ಬ ಆರೋಪಿ ನಾಗ್ಪುರದಲ್ಲಿ ಬಂಧಿತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.