ಅಯೋಧ್ಯೆ: ದೇಶದ ಹೆಮ್ಮೆಯ ಶ್ರೀರಾಮಮಂದಿರದ ಸಮೀಪದಲ್ಲೇ ಇರುವ ಕಾಲುವೆಯಲ್ಲಿ ದಲಿತ ಯುವತಿಯೊಬ್ಬಳ ಶವ ಕೊಳೆತ ರೀತಿಯಲ್ಲಿ ಪತ್ತೆಯಾಗಿರುವುದು ದೇಶದ ದುಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಉತ್ತರ ಪ್ರದೇಶದ ಅಯೋಧ್ಯೆಯ ಕಾಲುವೆಯೊಂದರಲ್ಲಿ 22 ವರ್ಷದ ದಲಿತ ಯುವಿಯ ನಗ್ನದೇಹ, ಕಣ್ಣುಗುಡ್ಡೆಗಳನ್ನು ಕಿತ್ತಿರುವ, ಕೈಕಾಲು ಕಟ್ಟಿದ, ಕೆಲ ಮೂಳೆಗಳು ಮುರಿದಿರುವ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ.
ದುಷ್ಕರ್ಮಿಗಳ ತಂಡ ಕೈಕಾಲು ಕಟ್ಟಿಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿ, ಅನಂತರ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಪ್ರಾಥನಿಕ ತನಿಖೆಯಿಂದ ತಿಳಿದುಬಂದಿದೆ.
ಯುವತಿ ಗುರುವಾರ ರಾತ್ರಿ ಭಗವದ್ ಕಥಾ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದಳು ಎನ್ನಲಾಗಿದೆ. ಆದರೆ, ಆಕೆ ಶುಕ್ರವಾ ಬೆಳಗ್ಗೆಯಾದರೂ ಮನೆಗೆ ಬಂದಿರಲಿಲ್ಲ. ಈ ವೇಳೆ ಆತಂಕಗೊAಡ ಪೊಲೀಸರು ದೂರು ನೀಡಿದರೂ ಪೊಲೀಸರು ದೂರು ಸ್ವೀಕಾರ ಮಾಡಿರಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ನೀವೇ ಹುಡುಕಿಕೊಳ್ಳಿ ಎಂದು ಪೊಲೀಸರು ಸಲಹೆ ನೀಡಿದ್ದು, ಇದೀಗ ಶವ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರಕರಣ ಸಂಬAಧ ಫೈಜಾಬಾಸ್ ಸಂಸದ ಅವಧೇಶ್ ಪ್ರಸಾದ್ ಕಿಡಿಕಾರಿದ್ದು, ರಾಮನ ಊರಿನಲ್ಲೇ ಹೆಣ್ಣುಮಕ್ಕಳ ರಕ್ಷಣೆ ಮಾಡುವಲ್ಲಿ ಸೋತಿದ್ದೇವೆ. ನಾನು ದಲಿತ ಯುವತಿಯ ಸಾವಿಗೆ ನ್ಯಾಯ ಸಿಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.