ಬೆಂಗಳೂರು: ‘ನಂಬಿದ ಗೆಳೆಯನಿಂದ ಮೋಸ ಹೋಗಿದ್ದೇನೆ,, ನನ್ನ ಕ್ಷಮಿಸಿ ಅಪ್ಪ, ಅಮ್ಮ’ ಇದು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಡೆತ್ ನೋಟ್‌ನಲ್ಲಿರುವ ಸಾಲು.
ಹೌದು, ಬಾಳಿ ಬದುಕಬೇಕಾದ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡ ಸ್ನಾತಕೋತ್ತರ ವಿದ್ಯಾರ್ಥಿನಿ ಎಚ್.ಎನ್ ಪಾವನಾ ಸಾವಿನ ಹಿಂದಿನ ರಹಸ್ಯ ಇದೀಗ ಹೊರಬಿದ್ದಿದೆ. ಮೊದಲಿಗೆ ಹಾಸ್ಟೆಲ್ ಅಥವಾ ಕಾಲೇಜಿನಲ್ಲಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಮೂಡಿತ್ತು.
ಆದರೆ, ಪೊಲೀಸರ ವಿಚಾರಣೆ ವೇಳೆ ಕಂಡುಬAದ ಅಂಶಗಳ ಆಧಾರದ ಮೇಲೆ ಆಕೆಯ ಸಾವಿಗೆ ಆಕೆಗಿದ್ದ ಪ್ರೇಮ ವೈಫಲ್ಯ ಕಾರಣ ಎಂದು ಗೊತ್ತಾಗಿದೆ. ಆಕೆಯೇ ಬರೆದಿಟ್ಟಿರುವ ಡೆತ್‌ನೋಟ್ ಪೊಲೀಸರ ಕೈಗೆ ಸಿಕ್ಕಿದೆ. ಅದರಲ್ಲಿ ಆಕೆ ತಾನೊಬ್ಬ ಹುಡುಗನನ್ನು ಪ್ರೀತಿಸುತ್ತಿರುವ ವಿಷಯವನ್ನು ಆಕೆ ಬರೆದುಕೊಂಡಿದ್ದಾಳೆ.
ನಾನು ನಂಬಿದ ಗೆಳೆಯ ನನಗೆ ಮೋಸ ಮಾಡಿದ್ದಾನೆ. ಆತನ ಮೋಸಕ್ಕೆ ಸಿಲುಕಿ ನಾನು ಹೈರಾಣಾಗಿದ್ದೇನೆ. ನನ್ನ ಜೀವನವನ್ನು ಕೊನೆಗಾಣಿಸಿಕೊಳ್ಳಲು ತೀರ್ಮಾನಿಸಿದ್ದೇನೆ. ನನ್ನನ್ನು ಕ್ಷಮಿಸಿ, ಅಪ್ಪ ಅಮ್ಮಾ ಎಂದು ಬರೆದಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಪ್ರೇಮ ವೈಫಲ್ಯದ ಕುರಿತು ಚರ್ಚೆ ನಡೆಯುತ್ತಿದೆ.