ಭೋಪಾಲ್: ಅಣ್ಣ ತಮ್ಮಂದಿರಿಬ್ಬರು ತಮ್ಮಿಬ್ಬರ ನಡುವಿನ ಕಲಹದಿಂದಾಗಿ ತಮ್ಮ ತಂದೆಯ ದೇಹವನ್ನು ಎರಡು ತುಂಡಗಳಾಗಿ ಮಾಡಿ ಅಂತ್ಯಸAಸ್ಕಾರ ನಡೆಸಿದ ಘಟನೆ ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.
ಟಿಕಮ್‌ಘಡ ಜಿಲೆಯ ಲಿಧೋರಾ ಗ್ರಾಮದ ೮೫ ವರ್ಷದ ಧ್ಯಾನಿ ಸಿಂಗ್ ಮರಣವೊಂದಿದ್ದರು. ಅವರ ಇಬ್ಬರು ಪುತ್ರರಾದ ದಾಮೋದರ್ ಸಿಂಗ್ ಮತ್ತು ಕಿಶನ್ ಸಿಂಗ್ ನಡುವೆ ಸಂಘರ್ಷ ಉಂಟಾಯಿತು.
ದಾಮೋದರ್ ಸಿಂಗ್ ತನ್ನ ತಂದೆಯ ಅಂತ್ಯಸAಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಂದರ್ಭದಲ್ಲಿ ಬಂದ ಕಿಶನ್ ತನ್ನ ತಂದೆಯ ಅಂತ್ಯಸAಸ್ಕಾರವನ್ನು ತಾನೇ ಮಾಡಬೇಕು ಎಂದು ಹಠ ಹಿಡಿದು ಕುಳಿತುಕೊಂಡ ಎನ್ನಲಾಗಿದೆ.
ಈ ವೇಳೆ ನಡೆದ ಘರ್ಷಣೆಯಲ್ಲಿ ಅಂತಿಮವಾಗಿ ತಂದೆಯ ದೇಹವನ್ನು ತುಂಡರಿಸಿ, ಇಬ್ಬರು ಅಂತ್ಯಸAಸ್ಕಾರ ಮಾಡುವ ಹಂತಕ್ಕೆ ಹೋದರು. ಸ್ಥಳೀಯ ಗ್ರಾಮಸ್ಥರು ಸತತವಾಗಿ ಪ್ರಯತ್ನಿಸಿದರೂ ಸಹೋದರರು ಕೇಳಲಿಲ್ಲ. ಹೀಗಾಗಿ, ಸುಮಾರು ೫ ಗಂಟೆ ಕಾಲ ಶವವನ್ನು ಮನೆಯ ಮುಂದೆಯೇ ಇರಿಸಿಕೊಂಡಿದ್ದರು.
ಅAತಿಮವಾಗಿ ಗ್ರಾಮಸ್ಥರೆಲ್ಲ ಸೇರಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದಾಗಲೇ ಸಹೋದರರು ಹಠ ಹಿಡಿದು ಕುಳಿತಿದ್ದು, ಕೊನೆಗೆ ಪೊಲೀಸರು, ಸಹೋದರರ ಮನವೊಲಿಸಿ, ಹಿರಿಯ ಸಹೋದರ ದಾಮೋದರ್ ಕೈಯ್ಯಿಂದಲೇ ಅಂತ್ಯಸAಸ್ಕಾರ ಮಾಡಿದರು ಎಂದು ಟೈಮ್ಸ್ ಆಪ್ ಇಂಡಿಯಾ ವರದಿ ಮಾಡಿದೆ.