ಬೆಂಗಳೂರು: ಅಮೇರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಭಾರತೋಯ ಪ್ರಜೆಗಳನ್ನು ಮಿಲಟರಿ ವಿಮಾನದ ಮೂಲಕ ಇಂದು ಭಾರತಕ್ಕೆ ಕಳುಹಿಸಲಾಗುತ್ತಿದೆ ಎಂದು ವರದಿಗಳು ಹೇಳಿವೆ.
ಕೆಲವು ಇಂಗ್ಲೀಷ್ ಸುದ್ದಿಸಂಸ್ಥೆಗಳು ಮಾಡಿರುವ ವರದಿಯ ಪ್ರಕಾರ. ಈಗಾಗಲೇ ವಿಮಾನ ಅಮೇರಿಕಾದಿಂದ ಹೊರಟಿದ್ದು, ಇಂದು ಭಾರತದ ಗಡಿಯೊಳಗೆ ಅಕ್ರಮ ವಲಸಿಗರನ್ನು ಇಳಿಸಲಿದೆ. ಟ್ರಂಪ್ ಅಧಿಕಾರ ಸ್ವೀಕಾರದ ನಂತರ ತೆಗೆದುಕೊಂಡ ವಲಸೆ ನೀತಿಯ ಕ್ರಮವಾಗಿ ಈ ಕ್ರಮ ಜರುಗಿಸಲಾಗುತ್ತಿದೆ.
ಈ ನಡುವೆ ಭಾರತದ ಪ್ರಜೆಗಳನ್ನು ಭಾರತಕ್ಕೆ ವಾಪಸ್ ಕಳುಹಿಸಲು ಭಾರತ ಸರಕಾರ ಒಪ್ಪಿದೆ. ನಮ್ಮ ಪ್ರಜೆಗಳು ಯಾವುದೇ ದೇಶದಲ್ಲಿ ಅಕ್ರಮವಾಗಿ ನೆಲಸಿದ್ದರೆ, ಅವರ ದಾಖಲೆಗಳ ಪರಿಶೀಲನೆ ನಡೆಸಿ, ಅವರನ್ನು ವಾಪಸ್ ಕರೆಸಿಕೊಳ್ಳಲು ಸಿದ್ಧವಿದ್ದೇವೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.