ಬೆಂಗಳೂರು: ಖ್ಯಾತ ಕ್ರಿಕೆಟರ್ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದ್ದು, ರಸ್ತೆಯಲ್ಲಿ ದ್ರಾವಿಡ್ ಮತ್ತು ಆಟೋ ಚಾಲಕನ ನಡುವೆ ಜಟಾಪಟಿ ನಡೆದಿದೆ.
ಈ ಘಟನೆ ಸಂಬಂಮಧ ಯಾವುದೇ ದೂರು ದಾಖಲಾಗಿಲ್ಲವಾದರೂ, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದ್ರಾವಿಡ್ ನಡೆಗೆ ಕೆಲವರು ಕಿಡಿಕಾರಿದ್ದರು. ದ್ರಾವಿಡ್ ಜತೆಗೆ ಆಟೋ ಚಾಲಕ ಈ ರೀತಿಯ ವರ್ತನೆ ತೋರಬಾರದಿತ್ತು ಎಂದು ಕೆಲವರು ಆಕ್ಷೇಪಿಸಿದ್ದಾರೆ.
ವಿಡಿಯೋದಲ್ಲಿ ದ್ರಾವಿಡ್ ಕಾರಿನ ಮುಂಭಾಗಕ್ಕೆ ಆಟೋ ಡಿಕ್ಕಿಯಾಗಿರುವುದು ಗೊತ್ತಾಗುತ್ತದೆ. ಆಟೋ ಚಾಲಕ ಹೇಳುವ ಪ್ರಕಾರ ಡ್ರಾವಿಡ್ ಅವರೇ ಹಿಂಬದಿಯಿಂದ ಢಿಕ್ಕಿ ಹೊಡೆದರು ಎನ್ನಲಾಗುತ್ತದೆ. ಆದರೆ, ಹಠಾತ್ತನೇ ಗೂಢ್ಸ್ ಆಟೋ ನಿಂತಿದ್ದಕ್ಕೆ ಘಟನೆ ನಡೆದಿದೆ ಎಂಬುದು ಗೊತ್ತಾಗುತ್ತದೆ.
ಈ ಘಟನೆ ಸ್ಥಳದಲ್ಲಿದ್ದವರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದ್ರಾವಿಡ್ ಇಂದಿರಾ ನಗರದ ಮನೆಯ ಬಳಿ ಓಡಾಡುವಾಗ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.