ಬೆಂಗಳೂರು: ಮೂರು ದಿನದ ಮಗುವಿನ ಹೊಟ್ಟೆಯಲ್ಲಿ ಎರಡು ಭ್ರೂಣ ಪತ್ತೆಯಾಗಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.
ಅಮರಾವತಿ ಜಿಲ್ಲೆಯ ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ನಡೆಸಿದ ಅಪರೂಪದ ಆಪರೇಷನ್ ವೇಳೆ ಮಗುವಿನ ಹೊಟ್ಟೆಯಲ್ಲಿದ್ದ ಎರಡು ಅವಳಿ ಭ್ರೂಣಗಳನ್ನು ಹೊರತೆಗೆಯಲಾಗಿದೆ. ಇದೊಂದು ಅಪರೂಪದ ಘಟನೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಬುಲ್ದಾನಾ ಜಿಲ್ಲೆಯ ಮಹಿಳೆಯೊಬ್ಬರನ್ನು ಕಳೆದ ತಿಂಗಳು ನಿಯಮಿತ ತಪಾಸಣೆ ಮಾಡುವಾಗ, ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ. ಫೆ. 1 ಆಕೆಗೆ ಹೆರಿಗೆಯಾಗಿದ್ದು, ಮಗುವನ್ನು ಮೂರು ದಿನದ ನಂತರ ಆಪರೇಷನ್ ಮಾಡಿ ಭ್ರೂಣ ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.