ಬೆಂಗಳೂರು: ಕಾಳಿದಾಸ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆ.ಸಿ. ಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೆ.ಸಿ. ಕೃಷ್ಣಪ್ಪ ಅವಿರೋಧವಾಗಿ ಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವೈ.ಸರೋಜಮ್ಮ ಆಯ್ಕೆಯಾದರು.
ಸಿ.ಎನ್. ಗೋವಿಂದಪ್ಪ, ಡಿ. ರಾಜು, ಎಂ.ಸಿ. ಮುದ್ದಯ್ಯ, ಎಂ.ಗಂಗಾಧರ್, ಆರ್.ಲಿಂಗಣ್ಣ, ಆರ್.ರಾಮಕೃಷ್ಣಪ್ಪ, ಎಂ.ಕೆ.ಗುರುಮೂರ್ತಿ, ಎಸ್.ಚಂದ್ರಣ್ಣ, ಎಂ.ಎಚ್.ಪ್ರೇಮಲತಾ, ಡಾ.ಪದ್ಮಾ ಪ್ರಕಾಶ್, ಬಿ.ಎಲ್.ಸುರೇಶ್ ನಿರ್ದೇಶಕರಾಗಿ ಆಯ್ಕೆಯಾದರು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದರು.