ಬಾಗಿಲುಗಳೇ ಇಲ್ಲದ ಬಾಲಕಿಯರ ಹಾಸ್ಟೆಲ್ ಶೌಚಾಲಯಗಳು : ಮುಖ್ಯಶಿಕ್ಷಕಿಯ ಅಮಾನತು
ಕೊಪ್ಪಳ: ಮಹಿಳೆಯ ರಕ್ಷಣೆ ಸುರಕ್ಷತೆಗೆ ಸರಕಾರ ಎಷ್ಟೆಲ್ಲ ಯೋಜನೆಗಳನ್ನು ನೀಡಿದರೂ ಅದು ಸದ್ಬಳಕೆಯಾಗದಿದ್ದರೆ ಹೇಗಿರುತ್ತದೆ ಎಂಬುದಕ್ಕೆ ಕೊಪ್ಪಳ ಜಿಲ್ಲೆಯ ಈ ಘಟನೆ ಒಂದು ಉದಾಹರಣೆ.
ಸರಕಾರ ಶಾಲೆ ಮತ್ತು ವಸತ ನಿಯಯಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ದೊಡ್ಡ ಮಟ್ಟದ ಅನುದಾನ ನೀಡುತ್ತದೆ. ಆದರೆ, ಅದರ ನಿರ್ವಹಣೆಗೆ ಬೇಜಾವ್ದಾರಿತನ ತೋರುವ ಶಿಕ್ಷಕರು ಮಾಡುವ ತಪ್ಪಿನಿಂದ ವಿದ್ಯಾರ್ಥಿನಿಯರು ಪರದಾಟ ನಡೆಸುತ್ತಿದ್ದಾರೆ.
ಹೀಗೊಂದು ಘಟನೆ ಕೊಪ್ಪಳ ಜಿಲ್ಲೆಯ ಬೆಟಗೇರಿಯಲ್ಲಿರುವ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯದ ಹಾಸ್ಟೆಲ್‌ಗಳ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಿರುವುದು ಮತ್ತು ಶೌಚಾಲಯಕ್ಕೆ ಬಾಗಿಲುಗಳೇ ಇಲ್ಲದಿರುವುದು ಕಂಡುಬAದಿದೆ.
ಈ ಹಾಸ್ಟೆಲ್ ಕೇಂದ್ರ ಸರಕಾರದಿಂದ ಸ್ಥಾಪಿಸಲ್ಪಟ್ಟಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನುದಾನದಲ್ಲಿ ನಡೆಯುತ್ತಿದೆ. ಶಾಲೆ ಮತ್ತು ಹಾಸ್ಟೆಲ್ ಕಟ್ಟಡಗಳು ಅಕ್ಕಪಕ್ಕದಲ್ಲಿಯೇ ಇವೆ. 6, 7 ಮತ್ತು 8 ನೇ ತರಗತಿಯ ಸುಮಾರು 120 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಸಮಗ್ರ ಶಿಕ್ಷಣ ಯೋಜನೆಯ ಸಹಾಯಕ ಸಂಯೋಜಕ ಎಚ್.ಅಂಜಿನಪ್ಪ ಅವರ ಶಾಲಾ ಪರಿಶೀಲನೆಯ ವೇಳೆ ಹಾಸ್ಟೆಲ್‌ನಲ್ಲಿರುವ ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಮತ್ತು ಬಾಗಿಲುಗಳೇ ಇಲ್ಲದಿರುವುದು ಕಂಡುಬAದಿದೆ. ಈ ಬಗ್ಗೆ ಅವರು ಮೇಲಾಧಿಕಾರಿಗಳೀಗೆ ವರದಿ ಸಲ್ಲಿಕೆ ಮಾಡಿದ್ದಾರೆ.
ವರದಿಯಲ್ಲಿ ಹಾಸ್ಟೆಲ್‌ನ ನೋಡಲ್ ಅಧಿಕಾರಿಯಾಗಿರುವ ಕಸ್ತೂರಿ ಬಡಿಗೇರ್ ಅವರು, ಸರಕಾರದಿಂದ ಬಂದ ಅನುದಾನದ ಮಾಹಿತಿಯನ್ನು ಸರಿಯಾಗಿ ನಮೂದಿಸಿಲ್ಲ, ಕೇಳಿದರೆ ಸ್ಕೂಲ್ ಬ್ಲಾಕ್‌ನಲ್ಲಿದೆ ಎಂದು ಹೇಳಿದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ.
ಜತೆಗೆ ಕಿಟಕಿಗಳಿಗೆ ಮೆಸ್ ಅಳವಡಿಸಿಲ್ಲ, ಹೀಗಾಗಿ, ಮಕ್ಕಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ತೆಂಗಿನ ಎಣ್ಣೆ, ನೋಟ್ ಪುಸ್ತಕ ಮತ್ತು ಟ್ರ್ಯಾಕ್ ಸೂಟ್‌ಗಳನ್ನು ಪೂರ್ಣವಾಗಿ ವಿತರಣೆ ಮಾಡಿಲ್ಲ, ಕುಡಿಯಲು ನೀಡುವ ನೀರು ಕೂಡ ಸಂಸ್ಕರಣೆ ಮಾಡದೆ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಎಲ್ಲ ಲೋಪಗಳ ಕಾರಣದಿಂದ ಹಾಸ್ಟೆಲ್ ನೋಡೆಲ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವರದಿಯಲ್ಲಿ ತಿಳಿಸಲಾಗಿತ್ತು. ಅದರನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಶ್ರೀಶೈಲ್ ಬೀರೇದಾರ್, ಮುಖ್ಯ ಶಿಕ್ಷಕಿ ಕಸ್ತೂರಿ ಬಡಿಗೇರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


