ದಶಕದಿಂದ ಉರಿಯುತ್ತಿದ್ದ ದೀಪ ನಂದಿಹೋಯ್ತು; ಗ್ರಾಮದ ಜನರಲ್ಲಿ ಆತಂಕ ಶುರುವಾಯ್ತು
ಶಿರಸಿ; ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ದೀಪನಾಥೇಶ್ವರ ದೇವಸ್ಥಾನದಲ್ಲಿ ಹಲವು ದಶಕಗಳಿಂದ ಎಣ್ಣೆ ಇಲ್ಲದೆ ಉರಿಯುತ್ತಿರುವ ಮೂರು ದೀಪಗಳು ಬುಧವಾರ ನಂದಿದ್ದು ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.
ದೇವರ ಅನುಗ್ರಹದಿಂದ ಮೂರು ದೀಪಗಳು ಯಾವುದು ಎಣ್ಣೆ ಹಾಗೂ ಬತ್ತಿ ಇಲ್ಲದೆ ಸುಮಾರು ಕಳೆದ 45 ವರ್ಷಗಳಿಂದ ಉರಿಯುತ್ತಾ ಬಂದಿದವು. ಈ ದೀಪಗಳು ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ್ದು ಪ್ರತಿದಿನವೂ ಸಾಕಷ್ಟು ಪ್ರವಾಸಿಗರು ದೀಪಗಳ ವೀಕ್ಷಣೆಗೆ ಆಗಮಿಸುತ್ತಿದ್ದರು.
ಆದರೆ, ಬುಧವಾರ ಮೂರು ದೀಪಗಳು ಹಾರಿದ ಸುದ್ಧಿ ಕಾಡುಗಚ್ಚಿನಂತೆ ಹರಡಿದೆ ಯಾವ ಕಾರಣಕ್ಕಾಗಿ ಈ ದೀಪಗಳು ಹಾರಿದವು ಎಂಬುದು ತಿಳಿದಾಗಿನಿಂದ ಸ್ಥಳೀಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ ಆದರೆ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದ ಕುಟುಂಬದವರು ಬೇಸರದಿಂದ ಗುಡಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.
ಸ್ಥಳೀಯ ಕೆಲ ಹಿರಿಯರು ಹಾಗು ದೇವಸ್ಥಾನದ ಪೂಜೆ ಮಾಡುವವರು ಗುರುಹಿರಿಯರಲ್ಲಿ ಹೋಮ-ಹವನ ಮಾಡಿಸಿದರೆ ಮರಳಿ ದೀಪಗಳು ಬೆಳಗಬಹುದು. ಅದೊಂದು ಪ್ರಯತ್ನ ಮಾಡಿ ನೋಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.


