ಮೈಕ್ರೋ ಫೈನಾನ್ಸ್ ಕಿರುಕುಳ: ಮುಕ್ತಿ ಕೊಡಿಸುವಂತೆ ಮಹಿಳೆಯರ ಗೋಳಾಟ
ಗದಗ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತಿರುವ ಮಹಿಳೆಯರು ಡಿಸಿ ಕಚೇರಿಯ ಮುಂದೆ ತಮಗೆ ಮುಕ್ತಿ ಕೊಡಿಸುವಂತೆ ಪರಿಪರಿಯಾಗಿ ಬೇಡಿಕೊಂಡ ಪ್ರಕರಣ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ತಾಲೂಕಿನ ಡಂಬಳ ಗ್ರಾಮದ ಸುಮಾರು ೨೦ಕ್ಕೂ ಹೆಚ್ಚು ಮಹಿಳೆಯರು ಮೈಕ್ರೋ ಫೈನಾನ್ಸ್ನವರ ಕಾಟದಿಂದ ನಾವೆಲ್ಲರೂ ಗ್ರಾಮ ತೆರೆದಿದ್ದೇವೆ. ನಮಗೆ ನೆಮ್ಮದಿಯೇ ಇಲ್ಲದಂತಾಗಿದೆ, ಇದರಿಂದ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿದರು.
ಕೆಲವು ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಮಾತಿಗೆ ಮರುಳಾಗಿ ಸಾಲ ಮಾಡಿದ್ದೇವೆ. ಇದೀಗ ಸಾಲ ವಸೂಲಿ ನೆಪದಲ್ಲಿ ನಮಗೆ ಕಿರುಕುಳ ಕೊಡುತ್ತಿದ್ದಾರೆ. ನಮಗೆ ಸರಿಯಾದ ದಾರಿ ತೋರಿಸಿ ಎಂದು ಮನವಿ ಮಾಡಿಕೊಂಡರು.


