ಬೆಳಗಾವಿ ರಾಮಕೃಷ್ಣ ಮಿಷನ್ ವಾರ್ಷಿಕೋತ್ಸವ : ಇಡಗುಂಜಿ ಮೇಳದವರಿಂದ ಯಕ್ಷಗಾನ ಪ್ರದರ್ಶನ

Share It

ಬೆಳಗಾವಿ: ಬೆಳಗಾವಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ನ ವಾರ್ಷಿಕೋತ್ಸವ ಪ್ರಯುಕ್ತ ಫೆಬ್ರವರಿ 9ರಂದು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

ಫೆಬ್ರವರಿ 9 ರಂದು ಆಧ್ಯಾತ್ಮಿಕ ಸಮ್ಮೇಳನ ನಡೆಯಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1.30 ರವರೆಗೆ ಭಜನೆ ಮತ್ತು ಪ್ರವಚನ ಏರ್ಪಡಿಸಲಾಗಿದೆ. ಜೀವನ ಎಂದರೇನು ವಿಷಯವಾಗಿ ತಮಿಳುನಾಡು ಊಟಿಯ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ರಾಘವೇಶಾನಂದಜೀ ಮಹಾರಾಜ ಅವರು ಮಾತನಾಡುವರು.

ಗುಜರಾತ್ ರಾಜ್ ಕೋಟ್ ರಾಮಕೃಷ್ಣ ಮಠದ ಸ್ವಾಮಿ ಗುಣೇಶಾನಂದಜೀ ಅವರು ಭಾಗವತದಲ್ಲಿರುವ ಮಾನವ ಧರ್ಮ, ಮದಿಹಳ್ಳಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮಂಗಳನಾಥ ನಂದಜೀ ಮಹಾರಾಜ ಅವರು ಉಪಯುಕ್ತ ಸಲಹೆಗಳು ವಿಷಯವಾಗಿ ಮಾತನಾಡುವರು.

ನಂತರ ಸಂವಾದ, ಪ್ರಶ್ನೋತ್ತರ ಏರ್ಪಡಿಸಲಾಗಿದೆ. ಸಂಜೆ 6 ಕ್ಕೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರಿಂದ ಪಂಚವಟಿ ಎಂಬ ಯಕ್ಷಗಾನ ಪ್ರದರ್ಶನವಾಗಲಿದೆ. ಕೆರೆಮನೆ ಶಿವಾನಂದ ಹೆಗಡೆ ಅವರ ನಿರ್ದೇಶನ ಇರಲಿದೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಪ್ರಕಟಣೆ ತಿಳಿಸಿದೆ.


Share It

You May Have Missed

You cannot copy content of this page