ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ಬೆಂಬಲ ಬೆಲೆ ಘೋಷಣೆ
ಬೆಂಗಳೂರು: ತೊಗರಿ ಬೆಳೆಗಾರರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದ್ದು, 450 ರು.ಗಳ ಸಹಾಯಧನ ಘೋಷಣೆ ಮಾಡಿದೆ.
ಶನಿವಾರ ಅಧಿಕೃತ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರದ ನಿಗಧಿತ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಬೋನಸ್ ರೂಪದಲ್ಲಿ 450 ರೂಗಳ ಸಹಾಯಧನ ನೀಡಲು ನಿರ್ಧರಿಸಿದೆ.
2024-25ನೇ ಸಾಲಿಗೆ ಕೇಂದ್ರ ಸರಕಾರ ತೊಗರಿ ಉತ್ಪನ್ನಗಳ ಪ್ರತಿ ಕ್ವಿಂಟಾಲ್‌ಗೆ 7,500 ರು. ಬೆಂಬಲಬೆಲೆ ನಿಗದಿ ಮಾಡಿದ್ದು, ರಾಜ್ಯ ಸರಕಾರ ಪ್ರತಿ ಕ್ವಿಂಟಾಲ್‌ಗೆ 450 ರು.ಗಳ ಹೆಚ್ಚುವರಿ ಪ್ರೋತ್ಸಾಹ ನೀಡಲು ತೀರ್ಮಾನಿಸಿದೆ.
ಹೆಚ್ಚವರಿ ಪ್ರೋತ್ಸಾಹಧನದಿಂದ ತಗಲುವ ವೆಚ್ಚವನ್ನು ಆವರ್ತ ನಿಧಿಯಿಂದ ಭರಿಸುವಂತೆ ಆರ್ಥಿಕ ಇಲಾಖೆ ಸಮ್ಮತಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಅನ್ವಯ ಪ್ರೋತ್ಸಾಹಧನ ವಿತರಣೆಗೆ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದೆ.


