ಅಪರಾಧ ಸುದ್ದಿ

ಅನಾರೋಗ್ಯ: ರೈಲಿಗೆ ಸಿಲುಕಿ ಸಂಕೇಶ್ವರದ ಕೆಕೆಆರ್‌ಟಿಸಿ ಚಾಲಕ ಆತ್ಮಹತ್ಯೆ

Share It

ಬೆಳಗಾವಿ : ಅನಾರೋಗ್ಯದಿಂದ ಬೇಸತ್ತು ಕೆಕೆಆರ್‌ಟಿಸಿ ಚಾಲಕರೊಬ್ಬರು ಶುಕ್ರವಾರ ಮುಂಜಾನೆ ಬಳ್ಳಾರಿಯಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿಯ ಸಂಕೇಶ್ವರ ಮೂಲದ ರಾಜು ದುಂಡಪ್ಪ ಪಾಟೀಲ (50) ಮೃತರು. ಬಳ್ಳಾರಿ ರೈಲ್ವೆ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಕೆಕೆಆರ್‌ಟಿಸಿಯ ಬಳ್ಳಾರಿ ವಿಭಾಗದ ಡಿಪೊ-2ದಲ್ಲಿ ಚಾಲಕರಾಗಿದ್ದ ಅವರು ದೇವಿನಗರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರು.

ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಇದೇ ವಿಚಾರವಾಗಿ ಮನನೊಂದಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page