ಅಪರಾಧ ಸುದ್ದಿ

ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆ ಪಡೆದಿದ್ದವನ ಮೇಲೆ ಎಫ್‌ಐಆರ್

Share It

ಕಲಬುರಗಿ: ನಕಲಿ ಅಂಕಪಟ್ಟಿ ನೀಡಿ ಅರಣ್ಯ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿದ್ದ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಬೀರಪ್ಪ ಎಂಬಾತ, 2014 ರಲ್ಲಿ ಅರಣ್ಯ ಇಲಾಖೆಗೆ ಅಂಕಪಟ್ಟಿ ಸಲ್ಲಿಕೆ ಮಾಡಿದ್ದ. ಆತ 316 ಅಂಕಪಡೆದಿದ್ದು, ಅದನ್ನು ತಿದ್ದಿ 605 ಅಂಕ ಮಾಡಿಕೊಂಡು ಕೆಲಸ ಗಿಟ್ಟಿಸಿಕೊಂಡಿದ್ದ ಎನ್ನಲಾಗಿದೆ.

ಶಿಕ್ಷಣ ಇಲಾಖೆಯ ಪರಿಶೀಲನೆಯ ವೇಳೆ ಕೃತ್ಯ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬAಧ ಪೊಲೀಸರು ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.


Share It

You cannot copy content of this page