ಬೆಂಗಳೂರು: ಯತ್ನಾಳ್ ಅವರಿಗೆ ನೊಟೀಸ್ ಕೊಡಿಸಿದ್ದು ವಿಜಯೇಂದ್ರ ಅವರ ಕೊನೆಯ ಪ್ರಯತ್ನ ಎಂದು ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಬಿ.ಪಿ.ಹರೀಶ್ ವ್ಯಂಗ್ಯವಾಡಿದ್ದಾರೆ.
ಯತ್ನಾಳ್‌ಗೆ ಶಿಸ್ತುಸಮಿತಿ ನೊಟೀಸ್ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇದು ವಿಜಯೇಂದ್ರ ಅವರ ಕೊನೆಯ ಪ್ರಯತ್ನ. ಕೊನೆಯ ಪ್ರಯತ್ನದ ಭಾಗವಾಗಿ ನೊಟೀಸ್ ಕೊಡಿಸಿದ್ದಾರೆ. ಯತ್ನಾಳ್ ಅವರು ಅದಕ್ಕೆ ಉತ್ತರ ನೀಡಲು ಸಮರ್ಥರಿದ್ದಾರೆ ಎಂದು ತಿಳಿಸಿದರು.
ನಾವು ಎಂದಿಗೂ ಹೈಕಮಾಂಡ್ ವಿರುದ್ಧ ಹೋಗುವುದಿಲ್ಲ ಎಂದು ಹೇಳಿದ್ದೇವೆ. ಅಂತೆಯೇ ನಡೆದುಕೊಂಡಿದ್ದೇವೆ. ನಮಗೆ ಪಕ್ಷವೇ ಮುಖ್ಯ, ಪಕ್ಷದ ಚೌಕಟ್ಟನ್ನು ಮೀರಿ ನಾವು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಬಿ.ಪಿ. ಹರೀಶ್ ತಿಳಿಸಿದ್ದಾರೆ.

