ರಾಜಕೀಯ ಸುದ್ದಿ

ನನಗೆ ಅಧಿಕೃತವಾಗಿ ಯಾವ ನೊಟೀಸ್ ಬಂದಿಲ್ಲ: ಯತ್ನಾಳ್

Share It

ಬೆಂಗಳೂರು: ಬಿಜೆಪಿ ಹೈಕಮಾಂಡ್‌ನ ಶಿಸ್ತುಸಮಿತಿ ಬಸವನಗೌಡ ಪಾಟೀಲ್ ಯತ್ನಾಳ್‌ಗೆ ಶೋಕಾಸ್ ನೊಟೀಸ್ ಕೊಟ್ಟಿದ್ದು, ಇದು ನನಗೆ ಅಧಿಕೃತವಾಗಿ ಇನ್ನೂ ಸಿಕ್ಕಿಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಯತ್ನಾಳ್, ನನಗೆ ಅಧಿಕೃತವಾಗಿ ಶೋಕಾಸ್ ನೊಟೀಸ್ ಸಿಕ್ಕಿಲ್ಲ. ಒಂದು ವೇಳೆ ನೊಟೀಸ್ ಕೊಟ್ಟಿದ್ದರೆ, ಅದಕ್ಕೆ ಸೂಕ್ತ ಉತ್ತರ ಕೊಡುತ್ತೇನೆ. ರಾಜ್ಯಾಧ್ಯಕ್ಷನ ಕುಟುಂಬ ರಾಜಕಾರಣ, ರಾಜಕೀಯ ವೈಪಲ್ಯಗಳನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದಿದ್ದಾರೆ.

ಉತ್ತರ ಕರ್ನಾಟಕದ ಕಡಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ವೈಫಲ್ಯದ ಬಗ್ಗೆ ಜನರಿಗೆ ವಿವರಿಸಲು ವಿಫಲವಾಗಿರುವ ಬಗ್ಗೆ ನಾನು ಮನವರಿಕೆ ಮಾಡಿಕೊಡುತ್ತೇವೆ. ಇದೆಲ್ಲವನ್ನೂ ಲಿಖಿತ ರೂಪದಲ್ಲಿ ಬರೆದು ಹೈಕಮಾಂಡ್ ಅಂಗಳಕ್ಕೆ ತಲುಪಿಸುತ್ತೇನೆ ಎಂದಿದ್ದಾರೆ.


Share It

You cannot copy content of this page