ಹೈದರಾಬಾದ್: ಆಸ್ತಿಗಾಗಿ ತನ್ನ ತಾತನನ್ನೇ 70 ಬರಿ ಇರಿದು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ಉದ್ಯಮಿ ೮೬ ವರ್ಷದ ಚಂದ್ರಶೇಖರ್ ಜನಾರ್ಧನ ರಾವ್ ಕೊಲೆಯಾದವರು. ಇವರು ವೆಲ್ಜನ್ ಗ್ರೂಪ್ ಆಫ್ ಇಂಡಸ್ಟಿçÃಸ್‌ನ ಮಾಲೀಕರಾಗಿದ್ದು, ತಮ್ಮ ಮನೆಯಲ್ಲಿಯೇ ಮೂರು ದಿನಗಳ ಹಿಂದೆ ಕೊಲೆಯಾಗಿದ್ದರು. ಇದೀಗ ಪೊಲೀಸರು ಅವರ ಮೊಮ್ಮU ಕಿಲಾರು ಕೀರ್ತಿ ತೇಜಾ ಕೊಲೆ ಆರೋಪಿ ಎಂದು ಬಂಧಿಸಿದ್ದಾರೆ.
ಕೀರ್ತಿ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ತಾತನಿಗೆ ಮಾತ್ರವಲ್ಲದೆ ತನ್ನ ಂತಾಯಿಗೂ ಇರಿದಿದ್ದು, ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೋಮಾಜಿಗುಡದಲ್ಲಿರುವ ತಾತನ ಮನೆಗೆ ಬಂದಿದ್ದ ತೇಜ, ಆಸ್ತಿಯನ್ನು ಹಂಚಿಕೆ ಮಾಡುವ ವಿಚಾರದಲ್ಲಿ ತಾತನೊಂದಿಗೆ ಜಗಳವಾಡಿದ್ದ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ತಾತನಿಗೆ ೭೦ ಬಾರಿ ಇರಿದು, ರಕ್ತಸಿಕ್ತವಾಗಿದ್ದ ತನ್ನ ಬಟ್ಟೆಗಳನ್ನು ಬದಲಾಯಿಸಿಕೊಂಡು, ಮನೆಯಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯ ನಡೆಸಿದ ನಂತರ ಆತ ನಗರ ತೊರೆದಿರಬಹುದು ಎಂದು ಹೇಳಲಾಗಿತ್ತಾದರೂ, ಮನೆಯಿಂದ ಸ್ವಲ್ಪವೇ ದೂರದಲ್ಲಿರುವ ಪಂಜಗುಟ್ಟ ಪ್ಲೆöÊಓವರ್ ಬಳಿ ಪೊಲೀಸರು ಬಂಧಿಸಿದ್ದಾರೆ. ಈತ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಇತ್ತೀಚೆಗೆ ವಾಪಸ್ ಬಂದಿದ್ದ ಎನ್ನಲಾಗಿದೆ.
ಕೊಲೆಯಾದ ರಾವ್ ಅವರಿಗೆ ಒಬ್ಬ ಮಗ ಹಾಗೂ ಮೂರು ಜನ ಹೆಣ್ಣುಮಕ್ಕಳಿದ್ದು, ಇವರೆಲ್ಲರ ನಡುವೆ ಆಸ್ತಿ ಹಂಚಿಕೆ ಸರಿಯಾಗಿ ಆಗಿಲ್ಲ ಎಂಬುದು ರಾವ್ ಮಗಳ ಪುತ್ರನಾದ ಕೀರ್ತಿಯ ಆಕ್ರೋಶವಾಗಿತ್ತು. ಹೀಗಾಗಿ, ತನ್ನ ತಾಯಿಯ ಜತೆಗೆ ತಾತನ ಬಳಿ ಆಸ್ತಿಯ ಪಾಲು ಕೇಳಲು ಬಂದಿದ್ದ. ಈ ವೇಳೆ ಗಲಾಟೆ ವಿಪರೀತಕ್ಕೆ ತಿರುಗಿತು.
ಇದ್ದಕ್ಕಿದ್ದಂತೆ ತಾತನ ಮೇಲೆ ಚಾಕುವಿನಿಂದ ಇರಿಯಲಾರಂಭಿಸಿದ. ಇದನ್ನು ಕಂಡು ಆತನ ತಾಯಿ ತಡೆಯಲು ಯತ್ನಿಸಿದಾಗ ಆಕೆಯ ಮೇಲೆಯೂ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ವೇಳೆ ಆಕೆಯ ತನ್ನ ಸಹೋದರಿನಿಗೆ ಕರೆ ಮಾಡಿ, ತನ್ನಪ್ಪನ ಕೊಲೆಯ ಬಗ್ಗೆ, ತನ್ನ ಪುತ್ರನ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
